CM ಸಿದ್ದರಾಮಯ್ಯ-ಬಾಲಿವುಡ್​​ ನಟ ಅಮೀರ್ ಖಾನ್ ಮುಖಾಮುಖಿ

dk - 2025-06-24T145930.518
Published on

ರಾಷ್ಟ್ರಪತಿಗಳ ಭೇಟಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ ಸಂದರ್ಭದಲ್ಲಿ ಮುಖ್ಯಮಂತ್ರಿ(CM) ಸಿದ್ದರಾಮಯ್ಯ ಹಾಗೂ ಬಾಲಿವುಡ್​​ನ ನಟ-ನಿರ್ದೇಶಕ ಅಮೀರ್ ಖಾನ್ ಮಂಗಳವಾರ ಮುಖಾಮುಖಿಯಾದರು.

ರಾಜ್ಯದ 7 ಮಸೂದೆಗಳಿಗೆ ಅನುಮೋದನೆ ನೀಡುವಂತೆ ಕೋರಿ ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಭೇಟಿಗಾಗಿ ನವದೆಹಲಿ ತೆರಳಿದ್ದರು.

ಇಂದು ರಾಷ್ಟ್ರಪತಿ ಭವನಕ್ಕೆ ತೆರಳಿದಾಗ ಬಾಲಿವುಡ್ ನಟ, ನಿರ್ದೇಶಕ ಮುಖಾಮುಖಿಯಾದರು. ಈ ವೇಳೆ ಪರಸ್ಪರ ಕುಶಲೋಪರಿ ವಿಚಾರಿಸಿ, ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net