ಪತ್ನಿ, ಮಗನನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಉದ್ಯಮಿ; ಕಾರಣ ಹೀಗಿದೆ | Businessman

Businessman
Published on

Businessman: ಉದ್ಯಮಿಯೊಬ್ಬರು ಪತ್ನಿ ಮತ್ತು ಮಗನನ್ನು ಗುಂಡಿಕ್ಕಿ ಕೊಂದು, ನಂತರ ತನ್ನ ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್‌ನ ಪಟಿಯಾಲದ ಹಳ್ಳಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಮೊಹಾಲಿಯ ವ್ಯಾಪಾರಿ ಸಂದೀಪ್ ಸಿಂಗ್ ರಾಜ್‌ಪಾಲ್ (45), ಅವರ ಪತ್ನಿ ಮಂದೀಪ್ ಕೌರ್ (42) ಮತ್ತು ಅವರ 15 ವರ್ಷದ ಮಗ ಅಭಯ್ ಸಿಂಗ್ ಎಂದು ಗುರುತಿಸಲಾಗಿದೆ.

ಸಂದೀಪ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಪತ್ನಿ ಮತ್ತು ಮಗನನ್ನು ಗುಂಡು ಹಾರಿಸಿ ಕೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ತೆಪ್ಲಾ ಬಾನೂರಿನ ರಾಷ್ಟ್ರೀಯ ಹೆದ್ದಾರಿಯ ನಿರ್ಜನ ಹಳ್ಳಿಯ ರಸ್ತೆಯಲ್ಲಿ ಕಾರು ನಿಂತಿರುವುದು ಕಂಡುಬಂದಿದ್ದು, ಗ್ರಾಮದ ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶವಗಳನ್ನು ಹೊರತೆಗೆದರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net