ಹೋಟೆಲ್, ರೆಸ್ಟೋರೆಂಟ್ ಪುನರಾರಂಭಕ್ಕೆ ಸಿಎಂ ಸಕಾರಾತ್ಮಕ ಸ್ಪಂದನೆ

hotel
Published on

ಬೆಂಗಳೂರು: ರಾಜ್ಯದಲ್ಲಿ ಎಲ್ಲ ವಿಧದ ಹೋಟೆಲ್, ರೆಸ್ಟೋರೆಂಟ್‌ಗಳ ಪುನರಾರಂಭಕ್ಕೆ ಪರವಾನಗಿ ನೀಡಬೇಕು ಎಂಬ ಬೇಡಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಇದರಿಂದಾಗಿ ಸದ್ಯದಲ್ಲೇ ಎಲ್ಲೆಡೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಪ್ರಾರಂಭವಾಗುವ ಸಾಧ್ಯತೆ ಇದೆ. ಸಿಎಂ ಅವರನ್ನು ಕರ್ನಾಟಕ ಪ್ರದೇಶ ಉಪಾಹಾರ ಮಂದಿರಗಳು ಹೋಟೆಲ್ ಮಾಲೀಕರ ಸಂಘದ ನಿಯೋಗ ಮಂಗಳವಾರ ಭೇಟಿಯಾಗಿ ಮನವಿ ಸಲ್ಲಿಸಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್, ಹೋಟೆಲ್-ರೆಸ್ಟೋರೆಂಟ್ ಹಾಗೂ ಲಾಜ್‌ಗಳನ್ನು ತೆರೆಯಲು ಪರವಾನಗಿ ನೀಡಬೇಕೆಂಬ ಮನವಿಗೆ ಮುಖ್ಯಮಂತ್ರಿ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದರು.

ವಹಿವಾಟಿಗೆ ಅವಕಾಶ ನೀಡಲೆಂದು ಮೇ 31ರೊಳಗೆ ಮಾರ್ಗಸೂಚಿ ರಚಿಸುವುದಾಗಿ ಭರವಸೆ ನೀಡಿದ್ದು, ಸದ್ಯದಲ್ಲೇ ವ್ಯಾಪಾರ ನಡೆಸಲು ಒಪ್ಪಿಗೆ ಸಿಗುವ ವಿಶ್ವಾಸ ಮೂಡಿಸಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net