ರಾಜ್ಯದಲ್ಲಿ ಲಾಕ್​ಡೌನ್​ ಮುಂದುವರಿಯುತ್ತಾ?: ಸಿಎಂ ನೇತೃತ್ವದಲ್ಲಿ ಈಗಾಗಲೇ ಸಭೆ ಆರಂಭ

bsy
bsy
Published on

ಬೆಂಗಳೂರು: ರಾಜ್ಯದಲ್ಲಿ ಮಿತಿಮೀರಿರುವ ಕರೊನಾ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ತರುವ ಸಲುವಾಗಿ ಈಗಾಗಲೇ ವಿಧಿಸಲಾಗಿರುವ ಲಾಕ್​ಡೌನ್​ ಇನ್ನೆರಡು ದಿನಗಳಲ್ಲಿ ಮುಗಿಯಲಿದೆ. ಈ ನಡುವೆ ಲಾಕ್​ಡೌನ್​ ಮುಂದುವರಿಯಲಿದೆಯೇ ಇಲ್ಲವೇ ಎಂಬ ಕುತೂಹಲ ರಾಜ್ಯದ ಜನತೆಯಲ್ಲಿ ಈಗಾಗಲೇ ಮೂಡಿದ್ದು, ಅದೀಗ ಮತ್ತಷ್ಟು ಉತ್ತುಂಗಕ್ಕೆ ಹೋಗುವಂತಾಗಿದೆ.

ಇನ್ನು ಲಾಕ್​ಡೌನ್​ ಕುರಿತ ನಿರ್ಧಾರದ ಬಗ್ಗೆ ಇರುವ ಕುತೂಹಲ ಇದೀಗ ಕೆರಳಲು ಕಾರಣ ಬಲವಾಗಿದೆ. ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ರಾಜ್ಯದ ಪ್ರಮುಖ ಸಚಿವರು, ಅಧಿಕಾರಿಗಳನ್ನು ಕರೆದು ಸಭೆ ನಡೆಸುತ್ತಿದ್ದಾರೆ. ಇಲ್ಲಿ ಲಾಕ್​ಡೌನ್​ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ಆರಂಭವಾಗಿದ್ದು, ಅದರ ಫಲಿತಾಂಶ, ಅಂದರೆ ಲಾಕ್​ಡೌನ್​ ಮುಂದುವರಿಕೆ ಕುರಿತ ನಿರ್ಧಾರ ಇನ್ನು ಕೆಲವೇ ಕ್ಷಣಗಳಲ್ಲಿ ಹೊರಬಿದ್ದರೂ ಅಚ್ಚರಿ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net