More

    ಈ ಐದಾರು ಹಳ್ಳಿಗಳ ಜನರು ಕರೊನಾ ಲಸಿಕೆ ತೆಗೆದುಕೊಳ್ಳಲಿಕ್ಕೇ ಹೆದರುತ್ತಿದ್ದಾರೆ!; ಇವರು ಹೇಳುತ್ತಿರುವ ಕಾರಣವೇ ಭಯಾನಕ!

    ಮಹಾರಾಷ್ಟ್ರ: ದೇಶದೆಲ್ಲೆಡೆ ಕರೊನಾ ವೈರಾಣು ಜನರನ್ನು ಹೈರಾಣಾಗಿಸುತ್ತಿರುವ ನಡುವೆ ಎರಡು ಲಸಿಕೆಗಳು ಆಶಾಕಿರಣವಾಗಿ ಹೊರಹೊಮ್ಮಿವೆ. ಸದ್ಯ ಕೋವಿಶೀಲ್ಡ್​ ಹಾಗೂ ಕೋವ್ಯಾಕ್ಸಿನ್ ಎಂಬ ಈ ಎರಡು ಲಸಿಕೆಗಳಿಗೆ ಎಷ್ಟು ಬೇಡಿಕೆ ಎಂದರೆ ಇವು ಸಮರ್ಪಕವಾಗಿ ಸಿಗುತ್ತಿಲ್ಲ. ನಮಗೆ ಲಸಿಕೆ ಸಿಕ್ಕರೆ ಸಾಕು ಎಂದು ಅಸಂಖ್ಯಾತ ಮಂದಿ ಕಾಯುತ್ತಿದ್ದರೂ ಇಲ್ಲೊಂದು ಐದಾರು ಹಳ್ಳಿಗಳ ಜನರು ಮಾತ್ರ ಲಸಿಕೆ ತೆಗೆದುಕೊಳ್ಳಲಿಕ್ಕೇ ಹೆದರುತ್ತಿದ್ದಾರೆ.

    ಮಹಾರಾಷ್ಟ್ರದ ಐದಾರು ಹಳ್ಳಿಗಳ ಜನರು ಕರೊನಾ ಲಸಿಕೆ ಬೇಡವೇ ಬೇಡ ಎಂದು ಹೇಳುತ್ತಿದ್ದು, ಇವರನ್ನು ಲಸಿಕೆ ತೆಗೆದುಕೊಳ್ಳುವಂತೆ ಮನವೊಲಿಸುವುದೇ ಆರೋಗ್ಯ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾಗೆ ಲಸಿಕೆ ತೆಗೆದುಕೊಳ್ಳದಿರಲು ಇವರು ಹೇಳುತ್ತಿರುವ ಕಾರಣ ಕೂಡ ಭಯಾನಕವಾಗಿದೆ.

    ಇದನ್ನೂ ಓದಿ: ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ! 

    ಮಹಾರಾಷ್ಟ್ರದ ಒಂದು ಪ್ರದೇಶದಲ್ಲಿ 76 ಹಳ್ಳಿಗಳಿದ್ದು, ಈ ಎಲ್ಲ ಹಳ್ಳಿಗಳ ಜನರು ಲಸಿಕೆ ಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಆದರೆ ಇಲ್ಲಿನ ಬುಡಕಟ್ಟು ಜನರು ಹೆಚ್ಚಿರುವ ರಾಯ್​ಗಡನಗರ ಸೇರಿ ಐದಾರು ಹಳ್ಳಿಗಳ ಜನರು ಲಸಿಕೆ ಬೇಡ ಎನ್ನುತ್ತಿದ್ದಾರೆ. ‘ಇಲ್ಲಿ ನಮ್ಮಲ್ಲಿ ಕೋವಿಡ್ ಬಂದಿಲ್ಲ ನಾವ್ಯಾಕೆ ಲಸಿಕೆ ತೆಗೆದುಕೊಳ್ಳಬೇಕು?’ ಎಂದು ಈ ಜನರು ಪ್ರಶ್ನಿಸುತ್ತಿದ್ದಾರೆ. ಮಾತ್ರವಲ್ಲ ಲಸಿಕೆ ತೆಗೆದುಕೊಂಡರೆ ಸತ್ತೇ ಹೋಗ್ತೇವೆ ಎಂಬ ತಪ್ಪು ಅಭಿಪ್ರಾಯ ಈ ಜನರಲ್ಲಿದೆ. ಈ ಹಳ್ಳಿಗಳ ಜನರಲ್ಲಿ ಲಸಿಕೆ ಕುರಿತು ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ಆರೋಗ್ಯ ಅಧಿಕಾರಿ ಡಾ.ಸೃಷ್ಟಿ ದವೆ ತಿಳಿಸಿದ್ದಾರೆ. (ಏಜೆನ್ಸೀಸ್)

    ಕೋವಿಡ್​ನಿಂದ ಗುಣವಾದ ಮೇಲೆ ಕಾಡುತ್ತದೆಯಂತೆ ನಿತ್ರಾಣ!; ಆರು ತಿಂಗಳಾದರೂ ಸುಸ್ತೋ ಸುಸ್ತು!

    ಕರೊನಾ ಟೆಸ್ಟ್​ ನೀವೇ ಮಾಡಿಕೊಳ್ಳಬಹುದು: ಪರೀಕ್ಷೆಗೆ ಎರಡೇ ನಿಮಿಷ, 15 ನಿಮಿಷಗಳಲ್ಲಿ ಫಲಿತಾಂಶ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts