'ಜನವಾಹಿನಿ' ಹೆಸರಿನಲ್ಲಿ ಮ್ಯಾರಥಾನ್​ ಕ್ಯಾಂಪೇನ್​ಗೆ ಮುಂದಾದ ಸಿಎಂ ಬೊಮ್ಮಾಯಿ

CM Bommai Campaign
Published on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಪಕ್ಷಗಳ ನಾಯಕರು ಅಬ್ಬರದ ಪ್ರಚಾರದಲ್ಲಿ ಮುಳುಗಿದ್ಧಾರೆ.

ಇನ್ನು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಒಂದು ಹೆಜ್ಜೆ ಮುಂದಿಟ್ಟಿದ್ದು ಮ್ಯಾರಥಾನ್ ಕ್ಯಾಂಪೇನ್ ಮಾಡಲು ಮುಂದಾಗಿದ್ಧಾರೆ.

ಮ್ಯಾರಥಾನ್ ಕ್ಯಾಂಪೇನ್

ಏಪ್ರಿಲ್​ 23ರಂದು ಬಸವ ಜಯಂತಿ ಪ್ರಯುಕ್ತ 'ಜಯವಾಹಿನಿ' ಹೆಸರಿನಲ್ಲಿ ಯಾತ್ರೆ ಆರಂಭವಾಗಲಿದ್ದು ಮೇ 7ರವರೆಗೆ ಮ್ಯಾರಥಅನ್ ಕ್ಯಾಂಪೇನ್​ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕಾಗಿ ವಿಶೇಷ ಬಸ್​ ಒಂದನ್ನು ತಯಾರಿ ಮಾಡಿಸಿರುವ ಸಿಎಂ ಟೀಂ ಭರ್ಜರಿ ಪ್ರಚಾರ ಕಾರ್ಯಕ್ಕರ ಮುನ್ನುಡಿ ಹಾಡಲಿದೆ ಎಂದು ವರದಿಯಾಗಿದೆ.

janavahini

ನಾಳೆ ಒಂದು ದಿನ 11ಕಡೆ ಪ್ರಚಾರ

ಜನವಾಹಿನಿ ಯಾತ್ರೆಯ ಅಂಗವಾಗಿ ಏಪ್ರಿಲ್​ 23 ಭಾನುವಾರದಂದು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ 11 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು ‌ಗ್ರಾಮಾಂತರ, ತುಮಕೂರು ನಗರ, ಗುಬ್ಬಿ , ತಿಪಟೂರು, ಅರಸೀಕೆರೆ, ಕಡೂರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಜನವಾಹಿನಿ ಯಾತ್ರೆ ಸಾಗಲಿದೆ ಎಂದು ವರದಿಯಾಗಿದೆ.

ಸಿಎಂ ರೋಡ್ ಶೋ ರೂಟ್ ಮ್ಯಾಪ್

ಯಲಹಂಕ - 17 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ದೊಡ್ಡಬಳ್ಳಾಪುರ - 27 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ನೆಲಮಂಗಲ - 31 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ದಾಬಸಪೇಟೆ - 22 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ತುಮಕೂರು ಗ್ರಾ. ಗೊಳೂರು - 25 ಕಿಮೀ ರೋಡ್ ಶೋ, ತುಮಕೂರು ನಗರ - 6 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ಗುಬ್ಬಿ - 20 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ಕೆ.ಬಿ ಕ್ರಾಸ್ - 33 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ತಿಪಟೂರು - 21 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ಅರಸಿಕೇರೆ - 27 ಕಿಮೀ ರೋಡ್ ಶೋ + ಸಾರ್ವಜನಿಕ ಸಭೆ, ಬಾಣವರ - 15 ಕಿಮೀ ರೋಡ್ ಶೋ, ಕಡೂರು - 23 ಕಿಮೀ ರೋಡ್ ಶೋ ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಸಿಎಂ ಬಸವರಾಜ್​ ಬೊಮ್ಮಾಯಿ ಮಾತನಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net