ಸಿಎಂ ಅತಿಶಿ 'ತಂದೆಯನ್ನು ಬದಲಾಯಿಸಿದ್ದಾರೆ': ಮೊತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡ ಬಿಜೆಪಿ ಅಭ್ಯರ್ಥಿ! | Controversy

dk - 2025-01-05T220415.235
Published on

ನವದೆಹಲಿ: ದೆಹಲಿ ಸಿಎಂ ಅತಿಶಿ ಅವರು ತಮ್ಮ ತಂದೆಯನ್ನು ಬದಲಾಯಿಸಿದ್ದಾರೆ ಎಂದು ಇಲ್ಲಿನ ಕಲ್ಕಾಜಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿವಾದತ್ಮಾಕ ಹೇಳಿಕೆ ಮೂಲಕ ಒಂದೇ ದಿನದಲ್ಲಿ(ಭಾನುವಾರ) ಮತ್ತೊಂದು ವಿವಾದ(Controversy) ಮೈ ಮೇಲೆ ಎಳೆದುಕೊಂಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಧುರಿ, "ಮರ್ಲೆನಾ ಆಗಿದ್ದ ಅತಿಶಿ ಈಗ ಸಿಂಗ್ ಆಗಿದ್ದಾರೆ, ಅವಳು ತನ್ನ ತಂದೆಯನ್ನೂ ಬದಲಾಯಿಸಿದ್ದಾಳೆ'' ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಅಲ್ಲದೆ, ಈ ಮುಂಚೆ ಕಾಂಗ್ರೆಸ್​ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರ ಕುರಿತು ಮಾತನಾಡಿದ್ದರು. ''ಒಂದು ವೇಳೆ ನಾನು ಚುನಾವಣೆಯಲ್ಲಿ ಗೆದ್ದರೆ ನಮ್ಮ ವಿಧಾನಸಭಾ ವ್ಯಾಪ್ತಿಯ ರಸ್ತೆಗಳು ಪ್ರಿಯಾಂಕಾ ಕೆನ್ನೆಗಳಂತೆ ಸುಗಮಾವಾಗಲಿವೆ'' ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನೆಲ್ಲೆ ಮತ್ತೊಂದು ವಿವಾದ ಹೇಳಿಕೆ ಹೊರ ಬಿದ್ದಿದೆ.

ಕೇಜ್ರಿವಾಲ್​ ಕಿಡಿ

ದೆಹಲಿ ಮುಖ್ಯಮಂತ್ರಿಯ ಮೇಲಿನ ವೈಯಕ್ತಿಕ ದಾಳಿಗೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ''ಬಿಜೆಪಿ ನಾಯಕರು ನಾಚಿಕೆಯಿಲ್ಲದ ಎಲ್ಲ ಮಿತಿಗಳನ್ನು ದಾಟಿದ್ದಾರೆ. ಬಿಜೆಪಿ ನಾಯಕರು ದೆಹಲಿ ಮುಖ್ಯಮಂತ್ರಿ ಅತಿಶಿ ಜಿ ಅವರನ್ನು ನಿಂದಿಸುತ್ತಿದ್ದಾರೆ. ಮಹಿಳಾ ಮುಖ್ಯಮಂತ್ರಿಯ ಅವಮಾನವನ್ನು ದೆಹಲಿಯ ಜನರು ಸಹಿಸುವುದಿಲ್ಲ. ದೆಹಲಿಯ ಎಲ್ಲಾ ಮಹಿಳೆಯರು ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತಾರೆ" ಎಂದು ಕೇಜ್ರಿವಾಲ್ ಎಕ್ಸ್​ ಖಾತೆಯಲ್ಲಿ ಕಿಡಿಕಾರಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net