

ದೆಹಲಿ: ದೆಹಲಿಯಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ ಇಲ್ಲಿನ ಕಲ್ಕಜಿ ವಿಧಾನಸಭೆ ವ್ಯಾಪ್ತಿಯ ರಸ್ತೆಗಳು ಸಂಸದೆ ಪ್ರಿಯಾಂಕ ಗಾಂಧಿ ವಾದ್ರ(Priyanka Gandhi) ಕೆನ್ನೆಯಂತೆಯೇ ರಸ್ತೆಗಳನ್ನು ಸುಗಮಗೊಳಿಸಲಾಗುತ್ತದೆ ಎಂದು ಬಿಜೆಪಿ ಮಾಜಿ ಸಂಸದ ಮತ್ತು ಅಭ್ಯರ್ಥಿ ರಮೇಶ್ ಬಿಧುರಿ ನೀಡಿದ್ದ ಹೇಳಿಕೆ ಭಾನುವಾರ ಭಾರಿ ವಿವಾದಕ್ಕೆ ಕಾರಣವಾಗಿದೆ.
ಈ ಹೇಳಿಕೆಗೆ ಕಾಂಗ್ರೆಸ್ ನಾಯಕರಿಂದ ಬಾರೀ ಆಕ್ರೋಶಕ್ಕೆ ಗುರಿಯಾಗಿದೆ. ಬಿಜೆಪಿಯೂ ಮಹಿಳಾ ವಿರೋಧಿ ಮನಸ್ಥಿತಿಯನ್ನು ಹೊಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ವಕ್ತಾರೆ ಎಂದು ಸುಪ್ರಿಯಾ ಶ್ರೀನಾಟೆ ಬಿಜೆಪಿ 'ಅಸಹ್ಯಕರ ಮನಸ್ಥಿತಿ ಹೊಂದಿದೆ' ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹಂಂಚಿಕೊಂಡಿದ್ದಾರೆ. '' ಬಿಜೆಪಿ ಅತ್ಯಂತ ಮಹಿಳಾ ವಿರೋಧಿ. ಪ್ರಿಯಾಂಕ ಗಾಂಧಿ ಬಗ್ಗೆ ಮಾತಮಾಡಿರುವ ಬಿಧರಿ ಹೇಳಿಕೆ ನಾಚಿಕೆಗೇಡಿನ ಸಂಗತಿ ಅಲ್ಲದೆ, ಅವರು ಅಸಹ್ಯ ಮನಸ್ಥಿತಿ ಹೊಂದಿದ್ದಾರೆ. ಸಂಸತ್ತಿನಲ್ಲಿರುವ ಸಹ ಸಂಸದೆಯನ್ನು ನಿಂದಿಸಿದ ವ್ಯಕ್ತಿಯಿಂದ ಇನ್ನೆನ್ನು ನೀರಿಕ್ಷಿಸಲು ಸಾಧ್ಯ. ಕೂಡಲೇ ಪ್ರಿಯಾಂಕ ಗಾಂಧಿಗೆ ಕ್ಷಮೆ ಕೇಳಬೇಕು'' ಎಂದು ಗುಡುಗಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಸುಪ್ರಿಯಾ ಶ್ರೀನಾಟೆ ಬಾವನೆಗಳನನ್ನು ಪ್ರತಿಧ್ವನಿಸಿದ್ದಾರೆ.'' ಬಿಧುರಿ ಅವರ ಮಾತುಗಳು ಬಿಜೆಪಿಯ ಸೈದ್ಧಾಂತಿಕವಾಗಿ ಪಾಲಕರಾದ ಆರ್ಎಸ್ಎಸ್ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ'' ಎಂದು ಪ್ರತಿಪಾದಿಸಿದ್ದಾರೆ.
''ನಟಿ ಹೇಮಮಾಲಿನಿ ಬಗ್ಗೆ ಲಾಲು ಯಾದವ್ ಇಂಥದ್ದೆ ಕಾಮೆಂಟ್ ಮಾಡಿದ್ದರು. ನನ್ನ ಹೇಳಿಕೆಯಿಂದ ಕಾಂಗ್ರೆಸ್ಗೆ ನೋವಾಗಿದ್ದರೆ.. ಅಂದು ಹೇಮಮಾಲಿನಿ ಬಗ್ಗೆ ಏಕೆ ನೋವಾಗಲಿಲ್ಲ. ಅವರು ಭಾರತ ಚಿತ್ರರಂಗದ ನಟಿ. ಅವರು ಮಹಿಳೆ ಅಲ್ಲವೇ ಎಂದು ರಮೇಶ್ ಬಿಧುರಿ ತಮ್ಮ ಈ ಹೇಳಿಕೆಯನ್ನು ಸಮರ್ಥಿಸಿಕೊಂಡರು''.
ಬಿಹಾರದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹೇಮ ಮಾಲಿನಿ ಕೆನ್ನೆಗಳಂತೆ ರಾಜ್ಯದ ರಸ್ತೆಗಳು ಮಾಡುವುದಾಗಿ ಲಾಲು ಯಾದವ್ ಹೇಳಿದ್ದರು. ಆದರೆ, ಅವರು ಈ ಭರವಸೆಯನ್ನು ಈಡೇರಿಸಲಲಿಲ್ಲ. ನಾನು ಚುನಾವಣೆಯಲ್ಲಿ ಗೆದ್ದರೆ ಪ್ರಿಯಾಂಕ ಗಾಂಧಿ ವಾದ್ರ ಕೆನ್ನೆಯ ಹಾಗೆ ರಸ್ತೆಗಳನ್ನು ಮಾಡುತ್ತೇನೆ ಎಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.(ಏಜೆನ್ಸೀಸ್)