ನಿವೇಶನ ಅತಿಕ್ರಮಣ ತೆರವು ಮಾಡಿ

sgr pro (2)
ಸಾಗರ ತಾಲೂಕಿನ ಅರಳಿಕೊಪ್ಪ ಗ್ರಾಮದಲ್ಲಿ ವಸತಿ ಬಡಾವಣೆ ನಿವೇಶನ ಅತಿಕ್ರಮಣ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಉಪವಿಭಾಗಾಧಿಕಾರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಅಮರನಾಥ್, ಮಹಾಬಲೇಶ್ವರ, ವೆಂಕಟೇಶ್, ಸುರೇಶ್, ಶಿವಾಜಿ ಇತರರಿದ್ದರು.
Published on

ಸಾಗರ: ತಾಲೂಕಿನ ಅರಳಿಕೊಪ್ಪ ಗ್ರಾಮದ ವಸತಿ ಬಡಾವಣೆಯಲ್ಲಿ ಅತಿಕ್ರಮಣ ಮಾಡಿದ ಜಾಗದಲ್ಲಿ ಕಾಮಗಾರಿ ಆರಂಭಿಸುತ್ತಿರುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ಉಪವಿಭಾಗಾಧಿಕಾರಿ ಆರ್.ಯತೀಶ್ ಅವರಿಗೆ ಗ್ರಾಮಸ್ಥರು ಸೋಮವಾರ ಮನವಿ ಸಲ್ಲಿಸಿದರು.

ಕಲ್ಮನೆ ಗ್ರಾಪಂನ ಅರಳಿಕೊಪ್ಪ ಗ್ರಾಮದ ಸರ್ವೇ ನಂ. 36ರ ವಸತಿ ಬಡಾವಣೆಯ ನಿವೇಶನ ಸಂಖ್ಯೆ 21 ಮತ್ತು 22 ಆಶ್ರಯ ನಿವೇಶನಗಳು. ಇದಕ್ಕೆ ಹೊಂದಿಕೊಂಡಿರುವ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಿಸಲಾಗಿದೆ. ಇದನ್ನು ತೆರವುಗೊಳಿಸುವಂತೆ ಈ ಹಿಂದೆಯೇ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಡಿ.8ರಂದು ಬೆಳಗ್ಗೆ ಅತಿಕ್ರಮ ಮಾಡಿಕೊಂಡ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಿರುವ ವ್ಯಕ್ತಿಯು ಜನರ ಗುಂಪು ಕಟ್ಟಿಕೊಂಡು ಬಂದು ಜೆಸಿಬಿ ಮೂಲಕ ಕೆಲಸ ಆರಂಭಿಸಿದ್ದರು. ತಕ್ಷಣ ಗ್ರಾಮಸ್ಥರು ಪೊಲೀಸರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಬಂದು ಕೆಲಸ ನಿಲ್ಲಿಸಿ, ಅಳವಡಿಸಿದ್ದ ಫ್ಲೆಕ್ಸೃ್ ತೆರವುಗೊಳಿಸಿದ್ದಾರೆ. ತಕ್ಷಣ ಈ ಜಾಗದ ಸರ್ವೇಗೆ ಆದೇಶ ಮಾಡಬೇಕು. ಜಾಗ ಅತಿಕ್ರಮಣ ಆಗಿದ್ದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಕಲ್ಮನೆ ಗ್ರಾಪಂ ಅಧ್ಯಕ್ಷ ಅಮರನಾಥ್, ಸದಸ್ಯ ಮಹಾಬಲೇಶ್ವರ, ವೆಂಕಟೇಶ್, ಸುರೇಶ್, ಶಿವಾಜಿ, ಮೋಹನ್, ಪದ್ಮಾವತಿ, ನಾಗರತ್ನಾ, ಜಲಜಾಕ್ಷಿ, ಪುಷ್ಪಲತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net