ಡೆಂಘೆ ತಡೆಯಲು ಸ್ವಚ್ಛತೆ ಅಗತ್ಯ

Published on

ಪಾತಪಾಳ್ಯ: ಡೆಂಘೆ ತಡೆಗಟ್ಟುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜತೆಗೆ ಸ್ವಚ್ಛತೆ ಕಾಪಾಡಬೇಕೆಂದು ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಡಿ.ಫಕೃದ್ಧೀನ್​ ತಿಳಿಸಿದರು.ತೋಳ್ಳಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಆಡ್ವೋಕೆಸಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.ಡೆಂ ಜ್ವರ ಸೊಳ್ಳೆಯ ವೈರಸ್​ನಿಂದ ಹರಡಲಿದ್ದು, ಈ ರೋಗಕ್ಕೆ ಯಾವುದೇ ಚಿಕಿತ್ಸೆ ಸಾಂದ್ರತೆ ಕಡಿಮೆ ಮಾಡುವ ಮೂಲಕ ನಿಯಂತ್ರಣ ಮಾಡಬಹುದು. ಹಾಗಾಗಿ ನೀರಿನ ತೊಟ್ಟಿ, ಬಿಸಾಡಿದ ತೆಂಗಿನ ಚಿಪ್ಪು, ಹೊಡೆದ ಬಾಟಲಿ, ಪ್ಲಾಸ್ಟಿಕ್​ ಲೋಟ ಹಾಗೂ ಟೈರ್​ಗಳನ್ನು ತೆರೆವುಗೊಳಿಸಬೇಕು. ವಾರದಲ್ಲಿ ಒಂದು ದಿನ ಸಂಗ್ರಹಿಸುವ ನೀರನ್ನು ಖಾಲಿ ಮಾಡಿ ಸ್ವಚ್ಛಗೊಳಿಸಬೇಕು ಎಂದರು.

ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ ಜೆ.ವಿ.ಹರ್ಷಿಯಾಭಾನು ಮಾತನಾಡಿ, ಪ್ರತಿ ಶುಕ್ರವಾರ ಸರ್ಕಾರದ ಆದೇಶದಂತೆ ಸಾರ್ವಜನಿಕರು ಮನೆಯ ಒಳಗೆ ಹಾಗೂ ಮನೆಯ ಸುತ್ತಮುತ್ತ ಸ್ವಯಂ ತಾವೇ ಲಾರ್ವ ಉತ್ಪತ್ತಿ ತಾಣಗಳನ್ನು ಗುರುತಿಸಿ ನಾಶಪಡಿಸುವ ಚಟುವಟಿಕೆ ಹಾಗೂ ಎಲ್ಲ ಕಚೇರಿ ಹಾಗೂ ಶಾಲಾ&ಕಾಲೇಜುಗಳ ಆವರಣದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳ ನಾಶ ಪಡಿಸುವ ಕಾರ್ಯವಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net