ತರಗತಿಯೊಳಗೆ ರೊಮ್ಯಾನ್ಸ್​! ಟೀಚರ್​ ಪಾಠ ಮರೆತು, ಚುಂಬಿಸಿದ ವಿದ್ಯಾರ್ಥಿಗಳಿಗೆ ನೆಟ್ಟಿಗರ ತರಾಟೆ​

ವಿಜಯವಾಣಿ-2024-08-12T150813.979
Published on

ನೋಯ್ಡಾ: ವಿದ್ಯಾರ್ಥಿಗಳಿಬ್ಬರು ತರಗತಿಯೊಳಗೆ ತಮ್ಮ ಶಿಕ್ಷಕರು ಪಾಠ ಮಾಡುತ್ತಿದ್ದರೆ, ಇತ್ತ ಇವರಿಬ್ಬರು ಪರಸ್ಪರ ಚುಂಬಿಸುವುದರಲ್ಲಿ ಮೈಮರೆತಿದ್ದಾರೆ. ಕ್ಲಾಸ್​ನಲ್ಲಿ ಯುವಕ ಮತ್ತು ಯುವತಿ ಕಿಸ್​ ಮಾಡುತ್ತಿರುವ ದೃಶ್ಯವನ್ನು ಅಲ್ಲೇ ಕುಳಿತಿದ್ದ ಮತ್ತೊಬ್ಬ ವಿದ್ಯಾರ್ಥಿ ತನ್ನ ಮೊಬೈಲ್​ನಲ್ಲಿ ಸೆರೆಹಿಡಿದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ವರದಿಯಾಗಿದೆ.

ಈ ವಿಡಿಯೋ ವೈರಲ್ ಆಗ್ತಿದ್ದಂತೆ ಕಿಡಿಕಾರಿರುವ ನೆಟ್ಟಿಗರು, ಕಷ್ಟಪಟ್ಟು ತಮ್ಮ ಮಕ್ಕಳು ಓದಿ, ವಿದ್ಯಾವಂತರಾಗಲಿ ಎಂದು ಫೀಸ್​ ಕಟ್ಟಿ, ಕಳುಹಿಸಿದರೆ, ಇವರು ಹೀಗೆಲ್ಲಾ ಮಾಡುವುದು ಎಷ್ಟು ಸರಿ ಎಂದು ಅಸಮಾಧಾನ ಹೊರಹಾಕಿದ್ದಾರೆ. ಶಾಕಿಂಗ್ ವಿಡಿಯೋ ವ್ಯಾಪಕವಾಗಿ ಹರಿದಾಡಿದ್ದು, ಮೇಲ್ನೋಟಕ್ಕೆ ಇದು ನೋಯ್ಡಾದ ಶಾಲೆ ಎಂದು ಹೇಳಲಾಗಿದೆ. ತರಗತಿಯಲ್ಲಿ ಶಿಕ್ಷಕರು ಭೋದನೆ ಮಾಡುತ್ತಿದ್ದರೆ, ಇತ್ತ ಇಬ್ಬರು ಪರಸ್ಪರ ತುಟಿಗೆ ಚುಂಬಿಸುವ ಮೂಲಕ ರೊಮ್ಯಾನ್ಸ್​ನಲ್ಲಿ ಮುಳುಗಿರುವುದು ದೃಶ್ಯದಲ್ಲಿ ಕಂಡುಬಂದಿದೆ.

ಕೆಲವರು ವಿಡಿಯೋ ನೋಡಿ ತೀವ್ರ ಮುಜುಗರಕ್ಕೆ ಒಳಗಾಗಿದ್ದು, ಇದಕ್ಕೆಲ್ಲಾ ಕಾರಣ ಬಾಲಿವುಡ್ ಸಿನಿಮಾಗಳು ಹಾಗೂ ವೆಬ್​ ಸೀರಿಸ್​ಗಳು ಎಂದು ಕಿಡಿಕಾರಿದ್ದಾರೆ. ಆಯಾ ಚಿತ್ರನಟರು ತಮ್ಮ ಫಿಲಂಗಳಲ್ಲಿ ಕಿಸ್ ಮಾಡುವುದೇ ಇಂತಹ ಘಟನೆಗಳಿಗೆ ಕಾರಣ. ಈ ರೀತಿಯ ಸಿನಿಮಾಗಳನ್ನು ನೋಡಿ ಪ್ರಭಾವಿತರಾಗುವ ವಿದ್ಯಾರ್ಥಿಗಳು, ಸಿನಿ ಶೈಲಿಯಲ್ಲೇ ಚುಂಬಿಸಲು ಮುಂದಾಗುತ್ತಾರೆ. ಯಾವಾಗ ಬಾಲಿವುಡ್​ನವರು ಇದನ್ನು ನಿಲ್ಲಿಸುತ್ತಾರೋ ಆಗ ಇದಕ್ಕೆ ಒಂದು ಫುಲ್​ಸ್ಟಾಪ್ ಸಿಗುತ್ತದೆ ಎಂದಿದ್ದಾರೆ.

ಇನ್ನು ಕೆಲವರು, ಈ ವಿಡಿಯೋ ನೋಡಿದ ಅವರ ಪೋಷಕರು ಎಷ್ಟು ಬೇಸರಕ್ಕೊಳಗಾಗಬಹುದು. ಇಂಥವರಿಗೆ ವಿದ್ಯಾಭ್ಯಾಸ ಕೊಡಿಸುವುದನ್ನು ನಿಲ್ಲಿಸಬೇಕು. ಇವರ ಓದಿಗೆ ಹಣ ಸುರಿಯುವುದನ್ನು ಮೊದಲು ನಿಲ್ಲಿಸಿ, ಮದುವೆ ಮಾಡಿಸುವುದು ಒಳಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net