ತಮಿಳುನಾಡು: ಜೂನ್ 14ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ತಮಿಳು ನಟ ವಿಜಯ್ ಸೇತುಪತಿ ಅಭಿನಯದ ‘ಮಹಾರಾಜ’ ಸಿನಿಮಾ ಇದೀಗ ಅಧಿಕೃತವಾಗಿ ಒಟಿಟಿ ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ಗೂ ಎಂಟ್ರಿ ಕೊಟ್ಟಿದೆ. ಸೇತುಪತಿ ಅಭಿನಯದ 50ನೇ ಚಿತ್ರ ಇದಾಗಿದ್ದು, ಬಾಕ್ಸ್ ಆಫೀಸ್ನಲ್ಲಿ ಹೆಚ್ಚಿನ ಭರವಸೆ ಮೂಡಿಸುವುದರ ಜತೆ ಜತೆಗೆ ಒಟಿಟಿಯಲ್ಲಿಯೂ ಸಖತ್ ಸದ್ದು ಮಾಡುತ್ತಿದೆ. ‘ಮಹಾರಾಜ’ ಚಿತ್ರದಲ್ಲಿ ವಿಜಯ್ ನಟನೆಗೆ ಫಿದಾ ಆಗಿರುವ ಸಿನಿಪ್ರಿಯರು, ಎಂತಹ ಅಮೋಘ ಅಭಿನಯ ಎಂದು ನಟನಿಗೆ ಜಾಲತಾಣಗಳಲ್ಲಿ ಮೆಚ್ಚುಗೆ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಹಿಳೆ ಪಿಸ್ತೂಲ್ ತೊಳೆಯುವ ಒಂದೇ ಒಂದು ವಿಡಿಯೋದಿಂದ ಬಯಲಿಗೆ ಬಂತು ಕರಾಳ ದಂಧೆ!
ಭಾರತೀಯ ಚಿತ್ರರಂಗದಲ್ಲಿ ತನ್ನದೇ ವಿಶೇಷ ಅಭಿಮಾನಿಗಳ ಬಳಗವನ್ನು ಹೊಂದಿರುವ ವಿಜಯ್ ಸೇತುಪತಿ, ಸಿನಿಪ್ರೇಕ್ಷಕರು ಅತಿಯಾಗಿ ಇಷ್ಟಪಡುವ ಸ್ಟಾರ್ ನಟರಲ್ಲಿ ಒಬ್ಬರು. ಯಾವುದೇ ಕಥಾಹಂದರವಿರಲಿ, ಎಂತಹ ಪಾತ್ರವಿರಲಿ, ಕೊಟ್ಟ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡುವ ಸೇತುಪತಿ, ಅದ್ಭುತ ನಟನೆಯಿಂದಲೇ ನೋಡುಗರ ಮನಗೆಲ್ಲುತ್ತಾರೆ. ಸರಳ ಅಭಿನಯ, ಪಾತ್ರ ಹಾಗೂ ಕಥೆಯ ಆಯ್ಕೆಯಲ್ಲೇ ಮೊದಲ ಗೆಲುವು ನೋಡುವ ವಿಜಯ್, ಸಿನಿಮಾ ರಿಲೀಸ್ ಆದ ನಂತರ ಅಭಿಮಾನಿಗಳ ಖುಷಿ, ಪ್ರಶಂಸೆಗಳನ್ನು ಪಡೆಯುವ ಮುಖೇನ ದೊಡ್ಡ ಗೆಲುವನ್ನು ಸಾಧಿಸುತ್ತಾರೆ. ಈ ವಿಷಯದಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ.
ಚಿತ್ರರಂಗಕ್ಕೆ ಪರಿಪೂರ್ಣ ನಟನಾಗಿ ಎಂಟ್ರಿ ಕೊಡುವ ಮುನ್ನ ಕಿರುಚಿತ್ರಗಳನ್ನು ಮಾಡಿಕೊಂಡು ಅಭಿನಯ ವೃತ್ತಿ ಆರಂಭಿಸಿದ ವಿಜಯ್ ಸೇತುಪತಿ, ಒಂದಷ್ಟು ವರ್ಷಗಳ ಕಾಲ ಭಾರೀ ಕಷ್ಟದ ಪರಿಸ್ಥಿತಿಯನ್ನು ಎದುರಿಸಿದರು. ಈ ಸಮಯದಲ್ಲಿ ಅವರು ಒಂದೇ ಒಂದು ಸಿನಿಮಾವನ್ನು ಮಾತ್ರ ಪದೇ ಪದೇ ನೋಡುತ್ತಿದ್ದರಂತೆ. ಅದು ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಅಥಡು ಚಿತ್ರ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಹಾಗೂ ನಟಿ ತ್ರಿಶಾ ಕೃಷ್ಣನ್ ಮುಖ್ಯಭೂಮಿಕೆಯಲ್ಲಿ ನಟಿಸಿದ ಈ ಚಿತ್ರವು ಸೇತುಪತಿ ಅವರ ನೆಚ್ಚಿನ ಸಿನಿಮಾವಾಗಿತ್ತು. ಇದನ್ನು ಪದೇ ಪದೇ ನೋಡಲು ಒಂದು ಬಲವಾದ ಕಾರಣವೂ ಇತ್ತಂತೆ. ಈ ಕುರಿತು ಸ್ವತಃ ವಿಜಯ್ ಅವರೇ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ ದಕ್ಷಿಣ ಕ್ಷೇತ್ರದ ವಿದ್ಯಾರ್ಥಿಗಳಿಗೆ ವಿಶೇಷ ಆಮಂತ್ರಣ.
ಅಥಡು ಚಿತ್ರದಲ್ಲಿ ಮಹೇಶ್ ಬಾಬು ಅವರ ಎಂಟ್ರಿಯಿಂದ ಕಡೆಯ ದೃಶ್ಯದವರೆಗೆ ಎಲ್ಲವೂ ವಿಶೇಷವಾಗಿದೆ. ಚಿತ್ರದಲ್ಲಿ ಅದ್ಭುತ ಭಾವನೆಗಳನ್ನು ತ್ರಿವಿಕ್ರಮ್ ತಮ್ಮ ನಿರ್ದೇಶನದಲ್ಲಿ ತೋರಿಸಿದ್ದಾರೆ. ಮಹೇಶ್ ಮತ್ತು ತ್ರಿಷಾ ನಡುವಿನ ಪ್ರೇಮ ಬಹಳ ಮುದ ನೀಡುತ್ತದೆ. ನನ್ನ ಕಷ್ಟದ ದಿನಗಳಲ್ಲಿ ಅತೀ ಹೆಚ್ಚು ನೋಡಿದ ಸಿನಿಮಾ ಇದೇ ಆಗಿದೆ ಎಂದು ವಿಜಯ್ ಸೇತುಪತಿ ತಿಳಿಸಿದ್ದಾರೆ,(ಏಜೆನ್ಸೀಸ್).
ಮಹಿಳೆ ಪಿಸ್ತೂಲ್ ತೊಳೆಯುವ ಒಂದೇ ಒಂದು ವಿಡಿಯೋದಿಂದ ಬಯಲಿಗೆ ಬಂತು ಕರಾಳ ದಂಧೆ!
ಹಿಂಡನ್ಬರ್ಗ್ ಹಿಡನ್ ಅಜೆಂಡಾ: ಅದಾನಿ ಷೇರುಗಳು 7% ದಿಢೀರ್ ಕುಸಿತ! ಹೂಡಿಕೆದಾರರಿಗೆ 53 ಕೋಟಿ ರೂ. ನಷ್ಟ