SIR ತಿರಸ್ಕರಿಸಿದ್ರೆ ಪೌರತ್ವ ಕಳೆದುಕೊಳ್ಳುವುದಿಲ್ಲ: ಸುಪ್ರೀಂಗೆ ತಿಳಿಸಿದ ಚುನಾವಣಾ ಆಯೋಗ!Election Commission

Election Commission, Supreme Court
Published on

Election Commission: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯ ನೋಂದಣಿಯಲ್ಲಿ ಅನರ್ಹರೆಂದು ಕಂಡುಬಂದರೆ, ಆ ವ್ಯಕ್ತಿಯು ಭಾರತೀಯ ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ (ECI) ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.

ಸಾಮೂಹಿಕ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಕಾರಣವಾಗಬಹುದು ಮತ್ತು "ಪೌರತ್ವ ಪರಿಶೀಲನೆ" ಅಭಿಯಾನದಂತೆ ಕಾರ್ಯನಿರ್ವಹಿಸಬಹುದು ಎಂದು ವಿರೋಧ ಪಕ್ಷಗಳು ಆರೋಪ ಮಾಡಿದ್ದ ಹಿನ್ನೆಲೆ ಭಾರತೀಯ ಚುನಾವಣಾ ಆಯೋಗದಿಂದ ಈ ಪ್ರತಿಕ್ರಿಯೆ ಬಂದಿದೆ.

ಸೋಮವಾರ ಸುಪ್ರಿಂ ಕೋರ್ಟ್​ಗೆ ಸಲ್ಲಿಸಿದ 88 ಪುಟಗಳ ಅಫಿಡವಿಟ್‌ನಲ್ಲಿ, ಚುನಾವಣಾ ಪಟ್ಟಿಯ ಶುದ್ಧತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಾಂವಿಧಾನಿಕ ಆದೇಶವಾಗಿ SIR(ಮತದಾರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಸಮರ್ಥಿಸಿಕೊಂಡಿದೆ.

ಮತದಾನದ ಹಕ್ಕನ್ನು ಸಕ್ರಿಯಗೊಳಿಸಲು ಪೌರತ್ವದ ಪುರಾವೆಯನ್ನು ಕೋರಲು ಆಯೋಗವು ತನ್ನ ಕಾನೂನು ಮತ್ತು ಸಾಂವಿಧಾನಿಕ ಅಧಿಕಾರವನ್ನು ಒತ್ತಿ ಹೇಳಿದೆ. ವಯಸ್ಕ ಮತದಾನದ ಹಕ್ಕು(ವಿಧಿ 326ರ) ಅಡಿಯಲ್ಲಿ ಅನರ್ಹತೆಯು ಪೌರತ್ವದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಜೂನ್ 24 ರಂದು ಮತದಾರರ ಪಟ್ಟಿ ಪರಿಷ್ಕರಣೆ ಪ್ರಾರಂಭವಾಗಿದ್ದು, ಬಿಹಾರದ ಸಮಗ್ರ ಮನೆ-ಮನೆಯ ಎಣಿಕೆ ಮಾಡಿ ಜುಲೈ 25 ರೊಳಗೆ ಅಸ್ತಿತ್ವದಲ್ಲಿರುವ ಎಲ್ಲಾ 7.8 ಕೋಟಿ ಮತದಾರರು ಹೊಸ ನಮೂನೆಗಳನ್ನು ಸಲ್ಲಿಸಬೇಕಾಗಿತ್ತು. ಕರಡು ಪಟ್ಟಿಯನ್ನು ಆಗಸ್ಟ್ 1 ರಂದು ಪ್ರಕಟಿಸಲಿದ್ದು, ಸೆಪ್ಟೆಂಬರ್ 1 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಅವಧಿ ಇರುತ್ತದೆ, ಅಂತಿಮ ಪಟ್ಟಿಯು ಸೆಪ್ಟೆಂಬರ್ 30 ರಂದು ಬರಲಿದೆ.(ಏಜನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net