ಮೃತ ಪ್ರಭುದ್ಯಾ ಮನೆಗೆ ಸಿಐಡಿ

CID
Published on

ಬೆಂಗಳೂರು: ವಿದ್ಯಾರ್ಥಿನಿ ಪ್ರಭುದ್ಯಾ ಕೊಲೆ ಪ್ರಕರಣದ ಹೆಚ್ಚುವರಿ ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳು ಮಂಗಳವಾರ, ಕೃತ್ಯ ನಡೆದ ಸ್ಥಳವಾದ ಮೃತಳ ಮನೆಗೆ ಭೇಟಿ ನೀಡಿ ತನಿಖೆ ಆರಂಭ ಮಾಡಿದ್ದಾರೆ.

ಮೇ 15ರಂದು ಸುಬ್ರಮಣ್ಯಪುರದ ಬೃಂದಾವನ ಲೇಔಟ್ ಮನೆಯ ಸ್ನಾನಗೃಹದಲ್ಲಿ ಕತ್ತು ಮತ್ತು ಕೈ ಕೊಯ್ದ ಸ್ಥಿತಿಯಲ್ಲಿ ಪ್ರಭುದ್ಯಾ (20) ಪತ್ತೆಯಾಗಿದ್ದಳು. ಆರಂಭದಲ್ಲಿ ಪೊಲೀಸರು, ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ವೇಳೆ ಅಪ್ರಾಪ್ತ ಕೃತ್ಯ ಎಂಬುದು ಗೊತ್ತಾಗಿ ಆತನನ್ನು ಬಂಧಿಸಿದ್ದರು. ಆದರೆ, ಮೃತಳ ತಾಯಿ ಕೆ.ಆರ್. ಸೌಮ್ಯ, ಸ್ಥಳೀಯ ಪೊಲೀಸರ ತನಿಖೆ ಮೇಲೆ ಅನುಮಾನ ವ್ಯಕ್ತಪಡಿಸಿ ಹೆಚ್ಚಿನ ತನಿಖೆ ನಡೆಸಲು ಸಿಐಡಿಗೆ ವಹಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಮೇರೆಗೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು.

ತನಿಖೆ ಕೈಗೊಂಡ ಸಿಐಡಿ ಅಧಿಕಾರಿಗಳು, ಬೃಂದಾವನ ಲೇಔಟ್‌ನಲ್ಲಿ ಇರುವ ಮೃತ ಪ್ರಭುದ್ಯಾ ಮನೆಗೆ ಭೇಟಿ ಕೊಟ್ಟು ತನಿಖೆ ಶುರು ಮಾಡಿದ್ದರು. ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಕಾನೂನು ತಜ್ಞರೊಂದಿಗೆ ಭೇಟಿ ಕೊಟ್ಟು ಸಾಕ್ಷಾೃಧಾರಗಳ ಸಂಗ್ರಹದಲ್ಲಿ ತೊಡಗಿದ್ದರು. ಪ್ರಭುದ್ಯಾ ತಾಯಿ ಕಡೆಯಿಂದ ಮರು ಹೇಳಿಕೆ, ಸಾಕ್ಷ್ಯಿದಾರರ ವಿಚಾರಣೆ ಮತ್ತು ಈಗಾಗಲೇ ಜಾಮೀನು ಪಡೆದು ಹೊರಬಂದಿರುವ ಅಪ್ರಾಪ್ತ ಬಾಲಕನ ವಿಚಾರಣೆ ಸಹ ನಡೆಸಲಿದ್ದಾರೆ. ಪ್ರಸ್ತುತ ಪ್ರಾಥಮಿಕ ತನಿಖೆ ಆರಂಭವಾಗಿದ್ದು, ಸ್ಥಳೀಯ ಪೊಲೀಸ ತನಿಖೆಯಲ್ಲಿ ಲೋಪ ಇದೀಯೇ ಇಲ್ಲವೇ ಎಂಬುದು ಹೇಳಲು ಸಾಧ್ಯ ಇಲ್ಲ ಎಂದು ಸಿಐಡಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net