

ಹೈದರಾಬಾದ್: ಸಿಐಡಿ ಅಧಿಕಾರಿಯ ವಿರುದ್ಧವೇ ಪ್ರಕರಣ ದಾಖಲಾಗಿರುವ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ.
ಎರಡು ವರ್ಷಗಳ ಹಿಂದೆ ಸರೂರ್ ನಗರ ಸ್ಟೇಡಿಯಂನಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದ ವೇಳೆ ಮೊದಲ ಬಾರಿಗೆ ಭೇಟಿಯಾದಾಗಿನಿಂದ ಅಧಿಕಾರಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸದರ್ನ್ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್ (ಟಿಎಸ್‌ಎಸ್‌ಪಿಡಿಸಿಎಲ್) ಮಹಿಳಾ ಉದ್ಯೋಗಿಯೊಬ್ಬರು ಹೇಳಿದ್ದಾರೆ. ಆರೋಪಿಯು ತನಗೆ ಅಶ್ಲೀಲ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ವ್ಯಾಟ್ಸ್ಆ್ಯಪ್ನಲ್ಲಿ ಕಳುಹಿಸುತ್ತಿದ್ದರು. ಸೀರೆಯಲ್ಲಿ ತನ್ನ ಛಾಯಾಚಿತ್ರವನ್ನು ಕಳುಹಿಸುವಂತೆಯೂ ಅಧಿಕಾರಿ ಹೇಳಿದ್ದ ಎಂದು ಆರೋಪಿಸಿದ್ದಾಳೆ.
ಅಲ್ಲದೇ ತಾನು ನಡೆಸುವ ನಡೆಸುವ ವಿಶೇಷ ತರಗತಿಗೆ ಹಾಜರಾಗುವಂತೆ ಅಧಿಕಾರಿ ಹೇಳಿದ್ದಾರೆ. ಜತೆಗೆ ಪ್ರಕರಣವೊಂದರ ಕುರಿತು ಚರ್ಚಿಸಲು ತನ್ನನ್ನು ಖುದ್ದಾಗಿ ಭೇಟಿಯಾಗುವಂತೆ ಹೇಳಿದ್ದಾನೆ ಎಂದು ಮಹಿಳೆಯು ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಗ್ರೇಟರ್ ಹೈದರಾಬಾದ್‌ನ ರಾಚಕೊಂಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಚೈತನ್ಯಪುರಿ ಪೊಲೀಸ್ ಠಾಣೆಯಲ್ಲಿ ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.(ಏಜೆನ್ಸೀಸ್)