ಆಗಸದಿಂದ ಸುರಿದ ಚಾಕಲೇಟ್​ ಕಣಗಳು...!

Chocolate
Published on

ಸ್ವಿಜರ್ಲೆಂಡ್​ನ ಪಟ್ಟಣವೊಂದರ ಜನರು ಊಹಿಸಲೂ ಸಾಧ್ಯವಿಲ್ಲದ ಘಟನೆಯೊಂದು ನಡೆದಿದೆ. ಅದನ್ನು ನೋಡಿ ಆವಾಕ್ಕಾದ ಜನರಿಗೆ ಶೀಘ್ರವೇ ಅದಕ್ಕೆ ಕಾರಣವೂ ಸಿಕ್ಕಿದೆ.

ಸ್ವಿಜರ್ಲೆಂಡ್​ನ ಸೊಲೊಥರ್ನ್ ಕ್ಯಾಂಟನ್‌ನಲ್ಲಿರುವ ಓಲ್ಟನ್​​ನಲ್ಲಿ ಚಾಕಲೇಟ್​ ಹಿಮಪಾತವಾಗಿದೆ. ಇಡೀ ಪಟ್ಟಣ ಚಾಕಲೇಟ್​ ಅಂಶವುಳ್ಳ ಹಿಮದಿಂದ ತುಂಬಿ ಹೋಗಿದೆ. ಅಂದರೆ ಭಾರೀ ಪ್ರಮಾಣದಲ್ಲಿ ಅಲ್ಲ. ಸಣ್ಣ ಪ್ರಮಾಣದಲ್ಲಿ ಬೀಳುವ ಹಿಮ ಚಾಕಲೇಟ್​ ಧೂಳನ್ನು ಒಳಗೊಂಡಿದೆ. ಇದನ್ನೂ ಓದಿ: ಮನೆಯಲ್ಲಿ ಶ್ರೀರಾಮನ ಪೂಜೆ ಮಾಡಿದ ಮುಸ್ಲಿಂ ಮಹಿಳೆಯರಿಗೆ ಸಜೀವ ದಹನದ ಬೆದರಿಕೆ

ಅದನ್ನು ನೋಡಿ ಕಂಗಾಲಾದ...ಕುತೂಹಲಭರಿತರಾದ ಜನರಿಗೆ ಪ್ರಸಿದ್ಧ ಚಾಕಲೇಟ್​ ಕಾರ್ಖಾನೆ ಲಿಂಡ್ಟ್ & ಸ್ಪ್ರೂಂಗ್ಲಿ ಉತ್ತರ ನೀಡಿದೆ. ಚಾಕಲೇಟ್​ ತಯಾರಿಕಾ ಕಾರ್ಖಾನೆಯಾದ ಲಿಂಡ್ಟ್ & ಸ್ಪ್ರೂಂಗ್ಲಿಯಲ್ಲಿ ವೆಂಟಿಲೇಶನ್​ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ, ಕೋಕಾ ಬೀನ್​​ನ ಹುರಿದು, ಪುಡಿಮಾಡಿದ ಸಣ್ಣ ಕಣಗಳು ಹೊರಸೂಸಲ್ಪಡುತ್ತಿವೆ. ಇವು ಸತತವಾಗಿ ವಾತಾವರಣಕ್ಕೆ ಸೇರುತ್ತಿರುವುದರಿಂದ ಚಾಕಲೇಟ್​ ಅಂಶವುಳ್ಳ ಹಿಮವೇ ಬೀಳುತ್ತಿದೆ. ಆ ಕಂಪನಿಯೇ ಇದನ್ನು ಒಪ್ಪಿಕೊಂಡಿದೆ ಎಂದು ಜರ್ಮನ್​ ಪತ್ರಿಕೆಯೊಂದು ವರದಿ ಮಾಡಿದೆ.

ಆ ಪಟ್ಟಣದ ಆಡಳಿತ ಟ್ವಿಟರ್ ನಲ್ಲಿ ಚಾಕಲೇಟ್​ ಹಿಮಪಾತ್ ಫೋಟೋವನ್ನೂ ಶೇರ್​ ಮಾಡಿದೆ. ಕಾರಿನ ಬಾನೆಟ್​ ಈ ಚಾಕಲೇಟ್​ ಅಂಶದ ಹಿಮದಿಂದ ಮುಚ್ಚಿರುವುದನ್ನು ನೋಡಬಹುದು. ಇದನ್ನೂ ಓದಿ:  ಕಾಕ್​​ಪಿಟ್​​ನಲ್ಲಿ ಪೈಲಟ್​ಗಳು ಏನೆನೆಲ್ಲ ಮಾಡ್ತಾರೆ? ಕೇಳಿದರೆ ಭಯ ಹುಟ್ಟುತ್ತದೆ…ಮುಜುಗರವೂ !

ಈ ಚಾಕಲೇಟ್​ ಧೂಳಿನಿಂದ ಮನುಷ್ಯರಿಗೆ ಆಗಲೀ, ಪರಿಸರಕ್ಕಾಗಲೀ ಯಾವುದೇ ಹಾನಿಯಿಲ್ಲ ಎಂದು ಸಮರ್ಥನೆ ನೀಡಿರುವ ಕಂಪನಿ, ಹಾಳಾಗಿರುವ ವೆಂಟಿಲೇಶನ್​​ನ್ನು ಈಗಾಗಲೇ ಸರಿಪಡಿಸಿರುವುದಾಗಿ ಹೇಳಿದೆ.

ಲಿಂಡ್ಟ್ & ಸ್ಪ್ರೂಂಗ್ಲಿ ಚಾಕಲೇಟ್​ ಕಂಪನಿ 1845ರಲ್ಲಿ ಸ್ಥಾಪನೆಯಾಗಿದ್ದು. ವಿಶ್ವದಾದ್ಯಂತ ಒಟ್ಟು 12 ಫ್ಯಾಕ್ಟರಿಗಳು, 410 ಚಾಕಲೇಟ್​ ಕೆಫೆಗಳು, ಅಂಗಡಿಗಳನ್ನು ತೆರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net