More

    ನಿಮ್ಮ ಕಣ್ಣಿಗೊಂದು ಸವಾಲು: ಈ ಚಿತ್ರದಲ್ಲಿ ಅಡಗಿರುವ ಬೆತ್ತಲೆ ಮಾಡೆಲ್​ ಗುರುತಿಸುವಿರಾ?

    ನವದೆಹಲಿ: ಕಲೆಗೆ ಸಾಟಿ ಯಾವುದಯ್ಯ ಎನ್ನುವಂತೆ ಕೆಲ ಕಲಾವಿದರು ಬೆತ್ತಲೆ ಮಾಡೆಲ್​ಗಳ​ ಮೂಲಕ ನಂಬಲಾಗದ ಬಾಡಿ ಪೇಂಟಿಂಗ್ ಕೌಶಲ್ಯಗಳನ್ನು ಬಳಸಿ ರಮಣೀಯ ದೃಶ್ಯಗಳನ್ನು ಸೃಷ್ಟಿಸುವ ಅತ್ಯದ್ಭುತ ಕಲೆಗೆ ಜೈಕಾರ ಹಾಕಲೇ ಬೇಕು.

    ಪ್ರಕೃತಿಯ ದೃಶ್ಯಗಳೊಂದಿಗೆ ಮಾಡೆಲ್​ಗಳನ್ನು ಸೇರಿಸುವಾಗ ಎಚ್ಚರಿಕೆಯಿಂದ ಪೇಂಟಿಂಗ್ ಮಾಡಲಾಗುವುದು.​ ಹಲವು ಗಂಟೆಗಳವರೆಗೆ ಬಾಡಿ ಪೇಂಟಿಂಗ್​ ಮಾಡಿ ಪ್ರಕೃತಿಯೊಂದಿಗೆ ಮಾಡೆಲ್​ಗಳನ್ನು ಸಹ ಬೆರೆಸಲಾಗುವುದು. ಈ ಕಲೆಗೆ ನಿಜಕ್ಕೂ ಪ್ರಶಂಸನೀಯ ಎಂದರೆ ತಪ್ಪಾಗಲಾರದು. ಇಂತಹ ದೃಶ್ಯಗಳನ್ನು ನೋಡುವಾಗ ನೈಜ ಪ್ರಕೃತಿಯ ಅನಾವರಣವೇ ಆಗುತ್ತದೆ. ಆದರೆ, ಸೂಕ್ಷ್ಮ ಕಣ್ಣಿನಿಂದ ನೋಡಿದಾಗಲೇ ಅಲ್ಲೊಬ್ಬ ವ್ಯಕ್ತಿ ಇರುವುದು ಗೊತ್ತಾದರೂ, ಪ್ರಕೃತಿಯ ಸೊಬಗು ಅದನ್ನು ಮರೆಸುತ್ತದೆ.

    ಇಂತಹ ಕಲೆಗಳಲ್ಲಿ ಜರ್ಮನ್​ ಆರ್ಟಿಸ್ಟ್​ ಜೊರ್ಗ್​ ಡಸ್ಟರ್​ವಾಲ್ಡ್​ (54) ಸಹ ಒಬ್ಬರು. ಬಾಡಿ ಪೇಂಟಿಂಗ್​ನಲ್ಲಿ ಪ್ರವೀಣರಾಗಿರುವ ಇವರು ಜಾಹಿರಾತು ಮತ್ತು ಟಿವಿ ಮಾರ್ಕೆಟಿಂಗ್​ ಅಭಿಯಾನಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 20 ವರ್ಷದಿಂದ ತನ್ನ ಕಲೆಯಲ್ಲಿ ಬಾಡಿ ಪೇಂಟಿಂಗ್​ ಕೌಶಲ್ಯವನ್ನು ಬಳಸುತ್ತಿದ್ದಾರೆ.

    ಅವರು ಸೃಷ್ಟಿರುವ ಚಿತ್ರವೊಂದರಲ್ಲಿ ಪಾಪಸ್​ ಕಳ್ಳಿ ಹಾಗೂ ಮರಗಳ ಕೆಳಗೆ ಬೇಲಿಯಂತಿರುವ ಕಲ್ಲುಗಳ ಸಾಲಿನಲ್ಲಿ ಬೆತ್ತಲೆ ಮಾಡೆಲ್​ ಕುಳಿತಿದ್ದಾರೆ. ನೋಡಲು ಥೇಟ್​ ಕಲ್ಲಿನ ಸಾಲಿನಂತೆ ಕಂಡರು ಸೂಕ್ಷ್ಮವಾಗಿ ನೋಡಿದರೆ ಮಾಡೆಲ್ ಇರುವುದು ತಿಳಿಯುತ್ತದೆ. ಬೇಕಿದ್ದರೆ ಆ ಚಿತ್ರವನ್ನು ನೀವಿಲ್ಲಿ ಗಮನಿಸಬಹುದು.

    ನಿಮ್ಮ ಕಣ್ಣಿಗೊಂದು ಸವಾಲು: ಈ ಚಿತ್ರದಲ್ಲಿ ಅಡಗಿರುವ ಬೆತ್ತಲೆ ಮಾಡೆಲ್​ ಗುರುತಿಸುವಿರಾ?

    ಜರ್ಮನಿಯಾದ್ಯಂತ ಸುಂದರವಾದ ಸ್ಥಳಗಳಲ್ಲಿ ಇವರ ಬಾಡಿ ಪೇಂಟಿಂಗ್​ ಚಿತ್ರಗಳನ್ನು ಕಾಣಬಹುದಾಗಿದೆ. ಇವರ ಚಿತ್ರಗಳು 2021ರ ಕ್ಯಾಲೆಂಡರ್​ನಲ್ಲೂ ಕಾಣಿಸಿಕೊಳ್ಳಲಿವೆ. ಬೆತ್ತಲೆ ಮಾಡೆಲ್​ಗಳ ಪೇಂಟಿಂಗ್​ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts