ಜನಸೇನಾ ಪಕ್ಷಕ್ಕೆ ಸೇರ್ಪಡೆಯಾದ ಚಿತ್ತೂರು ಶಾಸಕ

pavan
Published on

ಚಿತ್ತೂರು(ಆಂಧ್ರಪ್ರದೇಶ): ಚಿತ್ತೂರು ವೈಎಸ್‌ಆರ್‌ಸಿಪಿ ಶಾಸಕ ಅರಣಿ ಶ್ರೀನಿವಾಸುಲು ಗುರುವಾರ ಜನಸೇನಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಜನಸೇನೆ ಮುಖ್ಯಸ್ಥ ಪವನ್ ಕಲ್ಯಾಣ್ ಸಮ್ಮುಖ ಸೇರ್ಪಡೆಯಾದರು. ಅರಣಿ ಶ್ರೀನಿವಾಸ್ ಅವರನ್ನು ಪವನ್ ಜನಸೇನಾ ಸ್ಕಾರ್ಫ್ ಹಾಕಿ ಪಕ್ಷಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಅರಣಿ ಶ್ರೀನಿವಾಸುಲು ಮಾತನಾಡಿ, ವೈಎಸ್‌ಆರ್‌ಸಿಪಿಯಲ್ಲಿ ಹಲವು ಅವಮಾನಗಳನ್ನು ಎದುರಿಸಿದ್ದೇನೆ. ಬಲಿಜ ಸಮುದಾಯಕ್ಕೆ ಸಂಬಂಧಿಸಿದಂತೆ ರಾಯಲಸೀಮೆಯಲ್ಲಿ ಗೆದ್ದ ಏಕೈಕ ಶಾಸಕ ನಾನೇ ಆಗಿದ್ದರೂ, ಜಗನ್ ನನಗೆ ಟಿಕೆಟ್ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಜನಸೇನಾ ಪಕ್ಷದ ತತ್ವಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಚಿತ್ತೂರಿನಲ್ಲಿ ಜನಸೇನಾ ಅಭಿಮಾನಿಗಳ ಮನೆಗಳನ್ನು ಕೆಡವಲಾಗುತ್ತಿದ್ದು, ತಿರುಪತಿಯಲ್ಲಿ ಬಡವರ ಮನೆಗಳನ್ನು ವೈಎಸ್ ಆರ್ ಸಿಪಿ ನಾಯಕರು ಕೆಡವುತ್ತಿದ್ದಾರೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net