ಹಾವು ಕಡಿದು ಮೊಳಕಾಲ್ಮೂರು ವಲಯ ಅರಣ್ಯಾಧಿಕಾರಿ ಸಾವು

RFO Snake Bite
Published on

ಚಿತ್ರದುರ್ಗ: ಹಾವು ಕಚ್ಚಿ ವಲಯ ಅರಣ್ಯಾಧಿಕಾರಿ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಅಧಿಕಾರಿಯನ್ನು ಟಿ.ಆರ್​. ಪ್ರಕಾಶ್​ ಎಂದು ಗುರುತಿಸಲಾಗಿದೆ. ಇವರು ಮೊಳಕಾಲ್ಮೂರಿನಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಎಂಡಿ ಮಹದೇವ್ ಎಂಬುವರ ನರ್ಸರಿಯಲ್ಲಿ ಹಾವು ಕಚ್ಚಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಹಾವು ಕಚ್ಚಿದ ಬಳಿಕ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಪ್ರಕಾಶ್​ ಅವರ ಸಾವಿನಿಂದ ಅವರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಅರಣ್ಯ ಹಾಗೂ ಪ್ರಾಣಿಗಳು ರಕ್ಷಣಾ ಸೇವೆ ತೊಡಗಿಸಿಕೊಂಡಿದ್ದ ಪ್ರಕಾಶ್​ ಅವರು ಹಾವಿನಿಂದಲೇ ಮೃತಪಟ್ಟಿರುವುದು ನಿಜಕ್ಕೂ ದುಃಖಕರ ಸಂಗತಿಯಾಗಿದ್ದು, ಬಂಧುಮಿತ್ರರು ಮತ್ತು ಆಪ್ತರು ಪ್ರಕಾಶ್​ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net