ಚೀನಾ ಜನಸಂಖ್ಯೆಯಲ್ಲಿ ಕುಸಿತ; 60 ವರ್ಷಗಳಲ್ಲಿ ಇದೇ ಮೊದಲ ಸಲ ಜನಸಂಖ್ಯೆ ಇಳಿಕೆ!

China
Published on

ಚೀನಾ: ಅತ್ಯಧಿಕ ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಕಳೆದ ಅರವತ್ತು ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಸಲ ಎಂಬಂತೆ ಜನಸಂಖ್ಯೆಯಲ್ಲಿ ಕುಸಿತವಾಗಿದೆ. ಚೀನಾದ ನ್ಯಾಷನಲ್ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್​ ಜನಸಂಖ್ಯೆ ಕುರಿತ ಅಂಕಿ-ಅಂಶ ಬಹಿರಂಗಪಡಿಸಿ ಈ ವಿಷಯ ಹೊರಹಾಕಿದೆ.

ಕಳೆದ ವರ್ಷ ಅಂದರೆ 2022ರಲ್ಲಿ ಚೀನಾದಲ್ಲಿ 9.56 ದಶಲಕ್ಷ ಮಕ್ಕಳು ಜನಿಸಿದ್ದು, 10.41 ದಶಲಕ್ಷ ಮಂದಿ ಸಾವಿಗೀಡಾಗಿದ್ದರು. ಈ ಮೂಲಕ 2022ರ ಅಂತ್ಯದಲ್ಲಿ ಚೀನಾದ ಒಟ್ಟು ಜನಸಂಖ್ಯೆ 1.41 ಬಿಲಿಯನ್​ ಆಗಿತ್ತು ಎಂದು ಮಂಗಳವಾರ ಅಲ್ಲಿನ ಸರ್ಕಾರ ತಿಳಿಸಿದೆ.

ಈ ಮೂಲಕ ಚೀನಾದ ಜನಸಂಖ್ಯೆಯಲ್ಲಿ ಕಳೆದ ವರ್ಷ ಸುಮಾರು 8.5 ಲಕ್ಷದಷ್ಟು ಕುಸಿತವಾಗಿದೆ. ಹೀಗೆ ಚೀನಾದಲ್ಲಿ ಜನಸಂಖ್ಯೆಯಲ್ಲಿ ಇಳಿಕೆ ಆಗಿರುವುದು 60 ವರ್ಷಗಳಲ್ಲಿ ಇದೇ ಮೊದಲು, 1961ರಿಂದ ಈಚೆಗೆ ಜನಸಂಖ್ಯೆಯಲ್ಲಿ ಕುಸಿತ ಆಗಿರಲಿಲ್ಲ ಎಂಬುದಾಗಿ ಅಲ್ಲಿನ ಸರ್ಕಾರ ಹೇಳಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net