ಕ್ಸಿನ್ಜಿಯಾಂಗ್​ನಲ್ಲಿ ಚೀನಾ ನರಮೇಧ?

China
Published on

ವಾಷಿಂಗ್ಟನ್: ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ನರಮೇಧ ರೀತಿಯ ಚಟುವಟಿಕೆಗಳು ನಡೆಯುತ್ತಿದ್ದು, ಕೂದಲಿನ ಉತ್ಪನ್ನಗಳ ತಯಾರಿಕೆಗಾಗಿ ಉಯ್ಘರ್ ಮುಸ್ಲಿಂ ಮಹಿಳೆಯರ ತಲೆ ಬೋಳಿಸಲಾಗುತ್ತಿದೆ ಎಂದು ಅಮೆರಿಕ ಗಂಭೀರವಾಗಿ ಆಪಾದಿಸಿದೆ.

ಆನ್​ಲೈನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯಾನ್, ಹಾಂಕಾಂಗ್​ನಲ್ಲಿ ನಡೆಯುತ್ತಿದ್ದ ಪ್ರಜಾಪ್ರಭುತ್ವ ಪರ ಚಳವಳಿಯನ್ನು ಹತ್ತಿಕ್ಕಿದ ಚೀನಾ ಈಗ ಉಯ್ಘರ್ ಸಮುದಾಯವನ್ನು ಗುರಿಯಾಗಿಸಿಕೊಂಡು ನರಮೇಧ ಅಥವಾ ಅದಕ್ಕೆ ಸಮೀಪದ ಚಟá-ವಟಿಕೆಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಕ್ಸಿನ್ಜಿಯಾಂಗ್​ನಲ್ಲಿ ಉಯ್ಘರ್ ಸೇರಿದಂತೆ ಇನ್ನಿತರ ಅಲ್ಪಸಂಖ್ಯಾತ ಸಮá-ದಾಯಗಳನ್ನು ಶೋಷಿಸಲಾಗುತ್ತಿದೆ. ಈ ದೌರ್ಜನ್ಯಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ. ಆದರೆ ಚೀನಾದ ವಿರುದ್ಧ ಇಷ್ಟು ಕ್ರಮ ಸಾಲದು, ವಿಶ್ವ ಸಮುದಾಯ ಒಂದಾಗಿ ಚೀನಾ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಭೀಕರ ಅಪಘಾತದಲ್ಲಿ 9 ಮಂದಿ ಸಾವು; 30 ಜನರಿಗೆ ಗಾಯ

ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಕೂದಲಿನ ಉತ್ಪನ್ನಗಳ ತಯಾರಿಕೆಗಾಗಿ ಉಯ್ಘರ್ ಸಮá-ದಯದ ಮಹಿಳೆಯರ ತಲೆ ಬೋಳಿಸಲಾಗುತ್ತಿದೆ. ಇದರಿಂದ ತಯಾರಾದ ವಸ್ತುಗಳನ್ನು ಅಮೆರಿಕಕ್ಕೆ ರಫ್ತು ಮಾಡಲಾಗುತ್ತಿದೆ. ಕಸ್ಟಮ್್ಸ ಮತ್ತು ಗಡಿ ಭದ್ರತಾ ಇಲಾಖೆಯು ಚೀನಾದಿಂದ ಪೂರೈಕೆಯಾದ ಕೂದಲಿನ ಉತ್ಪನ್ನಗಳ ತಪಾಸಣೆ ವೇಳೆ ಮಾನವರ ಕೂದಲು ವಿಪುಲವಾಗಿ ಬಳಕೆಯಾಗಿರುವುದು ಕಂಡುಬಂದಿದೆ. ಈ ಸರಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಒಬ್ರಿಯಾನ್ ಹೇಳಿದ್ದಾರೆ.

ಬಲವಂತವಾಗಿ ಶಸ್ತ್ರಚಿಕಿತ್ಸೆ: ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಮುಸ್ಲಿಂ ಮಹಿಳೆಯರಿಗೆ ಬಲವಂತವಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಗರ್ಭಿಣಿಯರನ್ನು ಎಳೆದೊಯ್ದು ಗರ್ಭಪಾತ ಮಾಡಿಸಲಾಗುತ್ತಿದೆ. ಇದು ಅತ್ಯಂತ ಆಘಾತಕಾರಿ ಬೆಳವಣಿಗೆ ಎಂದು ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಕಳೆದ ಜೂನ್​ನಲ್ಲೇ ಆಪಾದಿಸಿದ್ದರು. ಚೀನಾದಲ್ಲಿ ನಡೆಯುತ್ತಿರುವ ಮಾನವೀಯತೆ ಮೇಲಿನ ದೌರ್ಜನ್ಯ ಮತ್ತು ನರಹತ್ಯೆಯಂತಹ ಘಟನೆಗಳನ್ನು ಯಾವುದೇ ನಾಗರಿಕ ಸಮಾಜ ಒಪು್ಪವುದಿಲ್ಲ. ಇಂಥ ಕೃತ್ಯಗಳನ್ನು ಅಮೆರಿಕ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಚೀನಾಕ್ಕೆ ಎಚ್ಚರಿಕೆ ನೀಡಿದ್ದರು.

10 ಲಕ್ಷ ಜನರ ಸೆರೆ

ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಸುಮಾರು 10 ಲಕ್ಷ ಮುಸ್ಲಿಮರನ್ನು ಬಂಧನದಲ್ಲಿ ಇರಿಸಲಾಗಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಚೀನಾದಲ್ಲಿ ದೌರ್ಜನ್ಯಗಳು ಮಿತಿಮೀರಿವೆ. ನರಹತ್ಯೆಯಂತಹ ಕ್ರೂರ ಘಟನೆಗಳು ನಡೆಯುತ್ತಿವೆ ಎಂದು ಮಾನವಹಕ್ಕುಗಳ ಹೋರಾಟಗಾರರು ಆಪಾದಿಸಿದ್ದಾರೆ. ಆದರೆ ಇದನ್ನು ಬಲವಾಗಿ ಅಲ್ಲಗಳೆದಿರುವ ಚೀನಾ, ಶಿಬಿರಗಳಲ್ಲಿ ವೃತ್ತಿ ಸಂಬಂಧಿ ತರಬೇತಿಗಳನ್ನು ನೀಡಲಾಗುತ್ತಿದೆ. ಇದರಿಂದ ಮೂಲಭೂತವಾದದ ವಿರುದ್ಧದ ಹೋರಾಟಕ್ಕೆ ಸಹಾಯವಾಗಿದೆ ಎಂದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net