ಜನರಲ್ ಲಿ ಶಾಂಗ್ಫುರನ್ನು ರಕ್ಷಣಾ ಸಚಿವ ಸ್ಥಾನದಿಂದ ತೆಗೆದು ಹಾಕಿದ ಚೀನಾ

le
Published on

ಬೀಜಿಂಗ್: ಎರಡು ತಿಂಗಳಿಂದ ನಾಪತ್ತೆಯಾಗಿದ್ದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ಫು ಅವರನ್ನು ಚೀನಾ ಸರ್ಕಾರ ತೆಗೆದುಹಾಕಿದೆ. ಆದರೆ ಇದಕ್ಕೆ ಯಾವುದೇ ವಿವರಣೆಯನ್ನು ನೀಡಲಾಗಿಲ್ಲ. ಇದನ್ನು ಚೀನಾ ರಾಜ್ಯ ಪ್ರಸಾರಕ ಸಿಸಿಟಿವಿ ವರದಿ ಮಾಡಿದೆ.

ಯಾವುದೇ ವಿವರಣೆಯನ್ನು ನೀಡದೆ ಜುಲೈನಲ್ಲಿ ಅಧಿಕಾರದಿಂದ ತೆಗೆದುಹಾಕಲ್ಪಟ್ಟ ಮಾಜಿ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ನಂತರ ಈ ವರ್ಷ ಜನರಿಂದ ದೂರವಿದ್ದ ಚೀನಾದ ಎರಡನೇ ಹಿರಿಯ ಅಧಿಕಾರಿ ಲಿ ಅವರಾಗಿದ್ದಾರೆ.

ಮಾರ್ಚ್‌ನಲ್ಲಿ ಕ್ಯಾಬಿನೆಟ್ ಪುನರ್ರಚನೆಯ ಸಮಯದಲ್ಲಿ ರಕ್ಷಣಾ ಸಚಿವರಾದ ಲಿ ಅವರು ಆಗಸ್ಟ್ 29 ರಂದು ಭಾಷಣ ಮಾಡಿದ ನಂತರ ಕಾಣಿಸಿಕೊಂಡಿರಲಿಲ್ಲ. ಕಿನ್ ಮತ್ತು ಲೀ ಅವರ ನಾಪತ್ತೆ ಚೀನಾದ ವಿದೇಶಾಂಗ ಅಥವಾ ರಕ್ಷಣಾ ನೀತಿಯಲ್ಲಿ ಬದಲಾವಣೆ ಸೂಚಿಸುತ್ತದೆ.

ಅಧ್ಯಕ್ಷ ಮತ್ತು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ನಾಯಕ ಕ್ಸಿ ಜಿನ್‌ಪಿಂಗ್ ಅವರ ಅಧಿಕಾರ ಮುಂದುವರಿಯುವ ಬಗ್ಗೆ ಪ್ರಶ್ನೆಗಳನ್ನು ಲಿ ಎತ್ತಿದ್ದರು. ಅವರು ಎಲ್ಲಕ್ಕಿಂತ ಹೆಚ್ಚಾಗಿ ದೇಶ ನಿಷ್ಠೆ ತೋರುತ್ತಿದ್ದರು. ಸಾರ್ವಜನಿಕ ಮತ್ತು ಖಾಸಗಿ ಭ್ರಷ್ಟಾಚಾರದ ವಿರುದ್ಧ ಪಟ್ಟುಬಿಡದೆ ದನಿ ಎತ್ತುತ್ತಿದ್ದರು.

ಇದು ಜಿನ್‌ಪಿಂಗ್ ಅವರಿಗೆ ಮುಜುಗರ ತರುತ್ತಿತ್ತು. ರಾಜಕೀಯ ಪ್ರತಿಸ್ಪರ್ಧಿಗಳನ್ನು ಮಟ್ಟ ಹಾಕಬೇಕು, ಹದಗೆಡುತ್ತಿರುವ ಆರ್ಥಿಕತೆಯ ನಡುವೆ ಅಮೆರಿಕಾದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ತಮ್ಮ ಮಾತು ಕೇಳುವವರನ್ನು ಆ ಸ್ಥಾನಕ್ಕೆ ತರಬೇಕೆಂಬುದು ಅಧ್ಯಕ್ಷ ಜಿನ್‌ಪಿಂಗ್ ಮನಸ್ಸಿನಲ್ಲಿರಬಹುದು. ಆದರೆ ವಾಷಿಂಗ್ಟನ್ ಲಿ ವಿರುದ್ಧದ ಕ್ರಮಗಳನ್ನು ತೆಗೆದುಹಾಕಬೇಕು ಎಂದು ಬಲವಾಗಿ ಒತ್ತಾಯಿಸಿದೆ.

ಚೀನಾದ ರಾಜಕೀಯ ಮತ್ತು ಕಾನೂನು ವ್ಯವಸ್ಥೆಗಳು ಹೆಚ್ಚು ಅಪಾರದರ್ಶಕವಾಗಿ ಉಳಿದಿವೆ, ಸಂಭವನೀಯ ಭ್ರಷ್ಟಾಚಾರ, ವೈಯಕ್ತಿಕ ದೋಷಗಳು ಅಥವಾ ಯಾರೂ ಪ್ರಭಾವ ವೃದ್ಧಿಸಿಕೊಳ್ಳಬಾರದೆಂಬ ಜಿನ್‌ಪಿಂಗ್ ನಿಲುವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net