More

    ‘ಭದ್ರತಾ ವ್ಯವಸ್ಥೆ ಬಲಪಡಿಸುವುದನ್ನು ಬಿಟ್ಟು ಬೇರೆ ಆಯ್ಕೆ ಇಲ್ಲ’: ತವಾಂಗ್‌ನಲ್ಲಿ ರಾಜನಾಥ್ ಸಿಂಗ್ ಹೇಳಿಕೆ

    ತವಾಂಗ್‌: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ (ಅಕ್ಟೋಬರ್ 24) ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಚೀನಾದ ಗಡಿಯ ಸಮೀಪವಿರುವ ಆಯಕಟ್ಟಿನ ಪ್ರಮುಖ ಪ್ರದೇಶದಲ್ಲಿ ಸೇನಾ ಸಿಬ್ಬಂದಿಯೊಂದಿಗೆ ಶಸ್ತ್ರಾಸ್ತ್ರ ಪೂಜೆ ಮಾಡಿ ದಸರಾ ಹಬ್ಬವನ್ನು ಆಚರಿಸಿದರು.

    ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರೊಂದಿಗೆ ಸಿಂಗ್ ಅವರು, ಅರುಣಾಚಲ ಪ್ರದೇಶದ ಎಲ್‌ಎಸಿ ಉದ್ದಕ್ಕೂ ಭಾರತದ ಮಿಲಿಟರಿ ಸನ್ನದ್ಧತೆಯ ಸಮಗ್ರ ಪರಿಶೀಲನೆ ನಡೆಸಿದರು ಮತ್ತು ಸೈನಿಕರನ್ನು ಶ್ಲಾಘಿಸಿದರು.

    ಸಿಂಗ್ ಬಮ್-ಲಾ ಮತ್ತು ಇತರ ಹಲವು ಪೋಸ್ಟ್‌ಗಳನ್ನು ಪರಿಶೀಲಿಸಿದರು. ಬಳಿಕ ಸೈನಿಕರೊಂದಿಗೆ ಸಂವಾದ ನಡೆಸಿದರು. ಪ್ರಸ್ತುತ ಜಾಗತಿಕ ಸನ್ನಿವೇಶವನ್ನು ಗಮನಿಸಿದರೆ ದೇಶದ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಅವರು ಹೇಳಿದರು.

    ನೀವು ಕಠಿಣ ಪರಿಸ್ಥಿತಿಯಲ್ಲಿ ಗಡಿಯನ್ನು ರಕ್ಷಿಸುತ್ತಿರುವ ಮತ್ತು ಭದ್ರಪಡಿಸುತ್ತಿರುವ ರೀತಿಯನ್ನು ಪ್ರಶಂಸಿಸದಿರಲು ಸಾಧ್ಯವಿಲ್ಲ. ನಿಮ್ಮ ಬಗ್ಗೆ ದೇಶದ ಜನರು ಹೆಮ್ಮೆಪಡುತ್ತಾರೆ. ನಿಮ್ಮಿಂದಾಗಿ ದೇಶ ಮತ್ತು ಜನರು ಸುರಕ್ಷಿತವಾಗಿದ್ದಾರೆ. ದಸರಾ ದುಷ್ಟರ ವಿರುದ್ಧ ಒಳಿತಿನ ವಿಜಯವನ್ನು ಸಂಕೇತಿಸುತ್ತದೆ ಎಂದು ಬಣ್ಣಿಸಿದರು.

    ಸಶಸ್ತ್ರ ಪಡೆಗಳ ಶೌರ್ಯ ಮತ್ತು ಬದ್ಧತೆ ಜಾಗತಿಕ ಮಟ್ಟದಲ್ಲಿ ಭಾರತದ ಬೆಳವಣಿಗೆಯ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಮತ್ತು ಅದು ಈಗ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿದೆ. ಸಶಸ್ತ್ರ ಪಡೆಗಳು ದೇಶದ ಗಡಿಯನ್ನು ಸಮರ್ಥವಾಗಿ ರಕ್ಷಿಸದಿದ್ದರೆ ಅದರ ಹಿರಿಮೆ ಹೆಚ್ಚಾಗುತ್ತಿರಲಿಲ್ಲ ಎಂದೂ ಅವರು ಹೇಳಿದ್ದಾರೆ. ರಾಜನಾಥ್ ಸಿಂಗ್ ಅವರು ಗೃಹ ಸಚಿವರಾಗಿದ್ದಾಗಲೂ ವಿಜಯದಶಮಿಯಂದು ಸೈನಿಕರೊಂದಿಗೆ ಶಸ್ತ್ರಾಸ್ತ್ರ ಪೂಜೆ ಮಾಡುತ್ತಿದ್ದರು.

    ಇಸ್ರೇಲ್-ಹಮಾಸ್ ಯುದ್ಧ: ಉಗ್ರರನ್ನು ಹೊಗಳಿದ್ದಕ್ಕೆ ನಟಿ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts