ಹುಟ್ಟೂರಿನಿಂದಲೇ ಕರೊನಾ ನಾಪತ್ತೆ! ಬುಧವಾರದಂದು ವುಹಾನ್​ನಲ್ಲಿ ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ

Corona
Published on

ವುಹಾನ್​: ಕರೊನಾ ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್​ನಲ್ಲಿ. ಅಲ್ಲಿಂದ ಆರಂಭವಾದ ಕರೊನಾ ದಾಳಿ ವಿಶ್ವವನ್ನೇ ಆವರಿಸಿಕೊಂಡಿದೆ. ಇದುವರೆಗೂ ಕರೊನಾದಿಂದಾಗಿ ಅತಿ ಹೆಚ್ಚು ದಾಳಿಯನ್ನು ಅನುಭವಿಸಿದ ವುಹಾನ್​ನಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೇ ಒಂದು ಹೊಸ ಪ್ರಕರಣ ಪತ್ತೆಯಾಗಿಲ್ಲ. ಈ ಮೂಲಕ ಚೀನಾ ಕರೊನಾ ಮುಕ್ತವಾಗುತ್ತಿದೆ ಎನ್ನುವುದು ಬೆಳಕಿಗೆ ಬಂದಿದೆ.

ಕಳೆದ ಕೆಲ ದಿನಗಳ ಹಿಂದೆ ವುಹಾನ್​ನಲ್ಲಿ ಪ್ರತಿ ದಿನ ಸಾವಿರಾರು ಜನರಲ್ಲಿ ಕರೊನಾ ವೈರಸ್​ ಪತ್ತೆಯಾಗುತ್ತಿತ್ತು. ನೂರಾರು ಜನರು ಸಾವನ್ನಪ್ಪುತ್ತಿದ್ದರು. ಅಲ್ಲಿದ್ದ ಆಸ್ಪತ್ರೆಗಳು ಸಾಲದೆ ಅನೇಕ ತಾತ್ಕಾಲಿಕ ಆಸ್ಪತ್ರೆಗಳನ್ನು ಸಹ ನಿರ್ಮಿಸಲಾಗಿತ್ತು. ಆದರೆ ಇದೀಗ ಅದೇ ವುಹಾನ್​ನಲ್ಲಿ ಒಂದೇ ಒಂದು ನೂತನ ಕರೊನಾ ವೈರಸ್​ ಪ್ರಕರಣ ಪತ್ತೆಯಾಗಿಲ್ಲ. ಡಿಸೆಂಬರ್​ನಲ್ಲಿ ವೈರಸ್​ ಪತ್ತೆಯಾದಾಗಿನಿಂದ ಇದೇ ಮೊದಲ ದಿನ ವುಹಾನ್​ನಲ್ಲಿ ನೂತನ ಪ್ರಕರಣ ಪತ್ತೆಗಾಗದಿರುವುದು.

ವುಹಾನ್​ ನಿವಾಸಿಗಳಲ್ಲಿ ನೂತನ ಪ್ರಕರಣಗಳು ಪತ್ತೆಯಾಗುತ್ತಿಲ್ಲ. ಆದರೆ ಚೀನಾದ ಅನೇಕ ಸ್ಥಳಗಳು ಮತ್ತು ಬೇರೆ ಬೇರೆ ದೇಶಗಳಿಂದ ವುಹಾನ್​ಗೆ ಬರುತ್ತಿರುವವಲ್ಲಿ ಮಾತ್ರ ಕರೊನಾ ಪತ್ತೆಯಾಗುತ್ತಿದೆ. ಬುಧವಾರದಂದು ವುಹಾನ್​ಗೆ ಬಂದ 34 ಜನರಲ್ಲಿ ಕರೊನಾ ಇರುವುದು ಧೃಡವಾಗಿದೆ. ಇದುವರೆಗೆ ವುಹಾನ್​ಗೆ ಬಂದಿರುವವರಲ್ಲಿ ಒಟ್ಟು 189 ಜನರಲ್ಲಿ ಕರೊನಾ ಪತ್ತೆಯಾಗಿದೆ. ಅದನ್ನು ಸಹ ನಿಯಂತ್ರಣಕ್ಕೆ ತರಲು ಅಲ್ಲಿನ ಸರ್ಕಾರ ಸಕಲ ಕ್ರಮಗಳನ್ನು ತೆಗೆದುಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net