ಗಡಿಯಲ್ಲಿ ಚೀನಾ ಯೋಧರ ಜಮಾವಣೆ: ಪ್ರತೀಕಾರಕ್ಕೆ ಭಾರತವೂ ಸನ್ನದ್ಧ

PLA
Published on

ನವದೆಹಲಿ: ಲಡಾಖ್ ಗಡಿಯಲ್ಲಿ ಭಾರತ-ಚೀನಾ ನಡುವಿನ ಉದ್ವಿಗ್ನತೆ ಮುಂದುವರಿದಿದೆ. ಭಾರತ-ಚೀನಾ ನಡುವಿನ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ 60 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಚೀನಾ ನಿಯೋಜಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ಕೂಡ ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ.

ಮುಂಚೂಣಿ ನೆಲೆಗಳಲ್ಲಿರುವ ತುಕಡಿಗಳಿಗೆ ಬೇಕಾದ ಸರಕುಗಳನ್ನು ವಾಯುಪಡೆಯ ಬೋಯಿಂಗ್ ಸಿ-17 ಗ್ಲೋಬ್‌ಮಾಸ್ಟರ್ ಸರಕು ಸಾಗಣೆ ವಿಮಾನ ಸರಬರಾಜು ಮಾಡುತ್ತಿದೆ. ಮತ್ತೊಂದೆಡೆ ಚೀನೂಕ್ ಹೆಲಿಕಾಪ್ಟರ್ ಸೇರಿ ಅತ್ಯಾಧುನಿಕ ಯುದ್ಧ ವಿಮಾನಗಳು ಗಡಿಯಲ್ಲಿ ಗಸ್ತು ತಿರುಗುತ್ತಿವೆ.

ಚೀನಾ ತನ್ನ ಸೈನಿಕರನ್ನು ನಿಯೋಜಿಸಿರುವ ವಿಷಯ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿಕೆಯಿಂದ ದೃಢಪಟ್ಟಿದೆ. ಕ್ವಾಡ್ ಗ್ರೂಪ್ ಎಂದು ಕರೆಯಲ್ಪಡುವ ಇಂಡೋ-ೆಸಿಪಿಕ್ ಭಾಗದ ರಾಷ್ಟ್ರಗಳಾದ ಭಾರತ, ಜಪಾನ್, ಅಮೆರಿಕ ಮತ್ತು ಆಸ್ಟ್ರೇಲಿಯಾ ಈ ನಾಲ್ಕೂ ರಾಷ್ಟ್ರಗಳೂ ಚೀನಾದ ಬೆದರಿಕೆಯನ್ನು ಎದುರಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net