ಹೌಸ್ಟನ್​ ಕಚೇರಿ ಮುಚ್ಚಿ ಎಂದರೆ, ನೀವು ಚೆಂಗ್ಡುನಲ್ಲಿರುವ ನಿಮ್ಮ ರಾಯಭಾರ ಕಚೇರಿ ಮುಚ್ಚಿ ಅನ್ನೋದೇ?

us and china
Published on

ಬೀಜಿಂಗ್​: ಅಮೆರಿಕ ಮತ್ತು ಚೀನಾ ನಡುವಿನ ಜಟಾಪಟಿ ಮುಂದುವರಿದಿರುವಂತೆ, ಚೆಂಗ್ಡುವಿನಲ್ಲಿರುವ ನಿಮ್ಮ ರಾಯಭಾರ ಕಚೇರಿಯನ್ನು ಮುಚ್ಚಿ ಎಂದು ಅಮೆರಿಕಕ್ಕೆ ಚೀನಾ ತಾಕೀತು ಮಾಡಿದೆ. ಏಟಿಗೆ ಎದಿರೇಟು ಎಂಬಂತೆ ಚೀನಾ ಈ ಕ್ರಮ ಕೈಗೊಂಡಿದೆ. ತಕ್ಷಣದಿಂದಲೇ ಆ ಕೇಂದ್ರದಲ್ಲಿನ ಎಲ್ಲ ಕಾರ್ಯಚಟುವಟಿಕೆಯನ್ನು ನಿಲ್ಲಿಸುವಂತೆ ಅದು ತಾಕೀತು ಮಾಡಿದೆ.

ಹೌಸ್ಟನ್​ನಲ್ಲಿರುವ ಚೀನಾದ ರಾಯಭಾರ ಕಚೇರಿಯನ್ನು ತಕ್ಷಣವೇ ಮುಚ್ಚುವಂತೆ ಗುರುವಾರ ಅಮೆರಿಕ ಚೀನಾಕ್ಕೆ ತಾಕೀತು ಮಾಡಿತ್ತು. ಈ ಕೇಂದ್ರದಲ್ಲಿ ಬೇಹುಗಾರಿಕೆ ನಡೆಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ಈ ಕ್ರಮ ಕೈಗೊಂಡಿತ್ತು.

ಇದಕ್ಕೆ ಪ್ರತಿಯಾಗಿ ಚೀನಾ ತನ್ನ ಸಿಕುಅನ್​ ಪ್ರಾಂತ್ರದ ಚೆಂಗ್ಡುವಿನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಬೇಕು ಎಂದು ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net