More

    ಬಂದಿವೆ ಹೊಸ ಬಗೆಯ ಹಪ್ಪಳ: ಇವನ್ನು ತಿಂದರೆ ದೇಹದಲ್ಲಿ ಪ್ರತಿಕಾಯಗಳು ಹೆಚ್ಚುತ್ತವಂತೆ!

    ಬಿಕನೇರ್​: ದಿನೇದಿನೆ ಹೆಚ್ಚಾಗುತ್ತಿರುವ ಕೋವಿಡ್​-19 ಸೋಂಕನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಬಗೆ ಬಗೆಯ ಕಾರ್ಯತಂತ್ರವನ್ನು ಅನುಸರಿಸುತ್ತಿದೆ. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಿರುವಾಗ ಕೇಂದ್ರ ಸಚಿವ ಅರ್ಜುನ್​ ರಾಂ ಮೇಘವಾಲ್​ ಹೊಸ ಬಗೆಯ ಹಪ್ಪಳವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಈ ಹಪ್ಪಳಗಳನ್ನು ತಿಂದರೆ ದೇಹದಲ್ಲಿ ಪ್ರತಿಕಾಯಗಳು ಹೆಚ್ಚಾಗಿ, ಕರೊನಾ ವೈರಾಣುವಿನ ವಿರುದ್ಧ ಹೋರಾಡಲು ದೇಹಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಇದು ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ.

    ಆತ್ಮನಿರ್ಭರ ಭಾರತ ಯೋಜನೆಯಡಿ ತಯಾರಾಗಿರುವ ಭಾಭಿ ಜಿ ಪಾಪಡ್​ ಎಂಬ ಹೆಸರಿನ ಈ ಹಪ್ಪಳವನ್ನು ಬಿಕನೇರ್​ನಲ್ಲಿ ಬಿಡುಗಡೆ ಮಾಡಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅರ್ಜುನ್​ ಮೇಘವಾಲ್​ ಮಾಡಿದ್ದಾರೆ ಎಂಬ ಭಾಷಣದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ. ತಮ್ಮ ಭಾಷಣದಲ್ಲಿ ಭಾಭಿ ಜಿ ಪಾಪಡ್​ ತಿನ್ನುವುದರಿಂದ ಆಗುವ ಆರೋಗ್ಯದ ಲಾಭಗಳನ್ನು ಸಚಿವರು ವಿವರಿಸಿದ್ದು, ಕರೊನಾ ವೈರಾಣು ಸೋಂಕಿನಿಂದ ಹೋರಾಡುವ ಶಕ್ತಿಯನ್ನು ಇದು ಹೆಚ್ಚಿಸುತ್ತದೆ ಎಂದು ಹೇಳಿರುವ ಮಾತು ಆ ವಿಡಿಯೋ ತುಣುಕಿನಲ್ಲಿದೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಬೇಲಿ ಮೇಲೆ ಕುಳಿತಿರುವವರು ಸ್ವಲ್ಪ ಆಚೀಚೆ ನೆಗೆದರೆ ಸಚಿನ್​ ಪೈಲಟ್​ ಸಿಎಂ

    ಕರೊನಾ ವೈರಾಣು ಸೋಂಕಿನ ಪಿಡುಗು ವಿಶ್ವದಾದ್ಯಂತ ಮಾರಕ ಪರಿಣಾಮಗಳನ್ನು ಉಂಟು ಮಾಡುತ್ತಿದ್ದು ಇದುವರೆಗೂ 6 ಲಕ್ಷ ಜನರನ್ನು ಬಲಿ ಪಡೆದಿದೆ. ಅಂದಾಜು 150 ಲಕ್ಷಕ್ಕೂ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಭಾರತವೊಂದರಲ್ಲೇ 12 ಲಕ್ಷ ಸೋಂಕಿತರು ಇದ್ದಾರೆ.

    ಭಾರತದಲ್ಲಿನ ಕೋವಿಡ್​ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಶೇ.80ರಿಂದ 90 ಯಶಸ್ವಿಯಾಗಿದೆ ಎಂದು ಏಪ್ರಿಲ್​-ಜೂನ್​ನಲ್ಲಿ ಮಾಡಲಾಗಿದ್ದ ಸಮೀಕ್ಷೆ ತಿಳಿಸಿತ್ತು. ಆದರೆ ಈಗ ಈ ಪ್ರಮಾಣ ಶೇ.77.3ಕ್ಕೆ ಕುಸಿದಿದೆ. ಇಂಥ ಪರಿಸ್ಥಿತಿಯಲ್ಲಿ ಕೇಂದ್ರ ಸಚಿವರೊಬ್ಬರು ಇಂಥ ಅಸಂಬದ್ಧ ಹೇಳಿಕೆ ನೀಡಿರುವುದು ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ.

    ಸಾಲಕ್ಕೆ ಅರ್ಜಿ ಸಲ್ಲಿಸಿದ್ದ ಚಹಾ ಮಾರಾಟಗಾರನಿಗೆ ಕಾದಿತ್ತು 50 ಕೋಟಿ ರೂ. ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts