More

    102 ದಿನಗಳ ಬಳಿಕ ನ್ಯೂಜಿಲೆಂಡ್​ನಲ್ಲಿ ಮತ್ತೆ ಕೋವಿಡ್​-19 ಪ್ರತ್ಯಕ್ಷ; ಅಕ್ಲೆಂಡ್​ ನಗರ ಸಂಪೂರ್ಣ ಲಾಕ್​ಡೌನ್​

    ಅಕ್ಲೆಂಡ್​: ಅಂದಾಜು 100 ದಿನಗಳಿಂದ ಯಾವುದೇ ಕೋವಿಡ್​-19 ಸೋಂಕು ಕಾಣಿಸಿಕೊಂಡಿಲ್ಲ ಎಂದು ಎರಡು ದಿನಗಳ ಹಿಂದಷ್ಟೇ ಬೀಗಿದ್ದ ನ್ಯೂಜಿಲೆಂಡ್​ನಲ್ಲಿ ಮತ್ತೆ ಕರೊನಾ ವೈರಾಣು ಸೋಂಕು ಪತ್ತೆಯಾಗಿದೆ. ಒಂದೇ ಕುಟುಂಬದ ನಾಲ್ವರಿಗೆ ಸೋಂಕು ತಗುಲಿದ್ದು, ಅದರ ಮೂಲ ಮಾತ್ರ ಇನ್ನೂ ನಿಗೂಢವಾಗಿದೆ.

    ವಿಷಯ ತಿಳಿದ ನ್ಯೂಜಿಲೆಂಡ್​ ಪ್ರಧಾನಿ ಜೆಸಿಂಡಾ ಆರ್ಡೆನ್​, ತಮ್ಮ ದೇಶದ ಅತಿದೊಡ್ಡ ನಗರ ಅಕ್ಲೆಂಡ್​ನ ಸಂಪೂರ್ಣ ಲಾಕ್​ಡೌನ್​ಗೆ ಆದೇಶಿಸಿದ್ದಾರೆ. ನಾವೆಲ್ಲರೂ ಒಂದಾಗಿ ಕರೊನಾ ವೈರಾಣುವನ್ನು ಸೋಲಿಸಿದ್ದೆವು. ಈಗಲೇ ನಾವೆಲ್ಲರೂ ಒಟ್ಟಾಗಿ ವೈರಾಣುವನ್ನು ಮತ್ತೊಮ್ಮೆ ಸೋಲಿಸಲು ಮುಂದಾಗೋಣ ಎಂದು ಮಂಗಳವಾರದ ಸುದ್ದಿಗೋಷ್ಠಿಯಲ್ಲಿ ಅವರು ದೇಶದ ಜನತೆಗೆ ಕರೆ ನೀಡಿದರು.

    ಅಕ್ಲೆಂಡ್​ನಲ್ಲಿ ಬುಧವಾರ ಮಧ್ಯಾಹ್ನದಿಂದ 3ನೇ ಹಂತದ ಮುಂಜಾಗ್ರತಾ ಕ್ರಮಗಳು ಜಾರಿಯಲ್ಲಿರಲಿದೆ. ಸಾಧ್ಯವಾದಲ್ಲಿ ಜನರು ಮನೆಯೊಳಗೆ ಇರಬೇಕು, ಹೊರಬಂದರೂ ಬೇರೊಬ್ಬರೊಂದಿಗೆ ದೈಹಿಕ ಸಂಪರ್ಕ ಹೊಂದುವಂತಿಲ್ಲ. ಈ ನಿಯಮ ಮೂರು ದಿನ ಜಾರಿಯಲ್ಲಿರಲಿದೆ. ಇನ್ನುಳಿದಂತೆ ನ್ಯೂಜಿಲೆಂಡ್​ನಾದ್ಯಂತ 2ನೇ ಹಂತದ ಮುಂಜಾಗ್ರತಾ ಕ್ರಮಗಳು ಜಾರಿಯಲ್ಲಿರಲಿವೆ. ಈ ಸಂದರ್ಭದಲ್ಲಿ ಜನರು ದೈಹಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಸಾರ್ವಜನಿಕ ಸಭೆಸಮಾರಂಭಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ನಿರ್ಬಂಧಿಸಲ್ಪಡಲಿದೆ.

    ಗಂಡನಿಗೆ ಲೈಂಗಿಕ ಸುಖ ನೀಡದಿರಲು ಹರಕೆ ಹೊತ್ತಿದ್ದೇನೆ ಅಂದಳು, ಅದಕ್ಕೆ ಆತ ಮಾಡಿದ್ದೇನು ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts