More

    ಸೋಂಕು ತಗುಲದಂತೆ ಎಚ್ಚರ ವಹಿಸಿ – ಶಾಸಕ ಹಾಲಪ್ಪ ಆಚಾರ್ ಸಲಹೆ

    ಯಲಬುರ್ಗಾ: ಕರೊನ ಎರಡನೇ ಅಲೆ ತೀವ್ರವಾಗಿದ್ದು, ಜನರು ಆತಂಕಪಡದೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.

    ತಾಲೂಕಿನ ಸಂಗನಹಾಳದಲ್ಲಿ ಒಂದೇ ದಿನ 33 ಜನರಿಗೆ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಬುಧವಾರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ದಿನೇ ದಿನೆ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಜನರು ಕರೊನಾ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಅನಗತ್ಯ ಹೊರಗೆ ಬರುವುದು ಹಾಗೂ ಮಾಸ್ಕ್ ಧರಿಸದಿರುವುದು ವೈರಸ್ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಅನಗತ್ಯವಾಗಿ ಹೊರಗೆ ಬರುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗ್ರಾಮವನ್ನು ಸ್ಯಾನಿಟೈಸ್ ಮಾಡಬೇಕೆಂದು ಹೇಳಿದರು.

    ತಹಸೀಲ್ದಾರ್ ಶ್ರೀಶೈಲ ತಳವಾರ್ ಮಾತನಾಡಿ, ಗ್ರಾಮದಲ್ಲಿ ಒಂದೇ ದಿನ 33 ಜನರಿಗೆ ಸೋಂಕು ತಗುಲಿರುವುದರಿಂದ ಜನರು ನಿಯಂತ್ರಣಾ ಕ್ರಮಗಳಿಗೆ ಸಹಕಾರ ನೀಡಬೇಕು. ವರ್ತಕರು ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ತಾಲೂಕು ಆರೋಗ್ಯಾಧಿಕಾರಿ ಮಂಜುನಾಥ ಬ್ಯಾಲಹುಣಸಿ, ಸಿಪಿಐ ಎಂ.ನಾಗರಡ್ಡಿ, ಗ್ರಾಪಂ ಅಧ್ಯಕ್ಷೆ ಫರೀದಾ ಬೇಗಂ, ಸದಸ್ಯರಾದ ಮಲ್ಲಪ್ಪ ಕಿನ್ನಾಳ, ದುರುಗಪ್ಪ ನಡುಲಕೇರಿ, ಮಲ್ಲಪ್ಪ ಜಂಬಣ್ಣವರ್, ಈಶಪ್ಪ ಕೋಳೂರು, ಪಿಡಿಒ ಗವಿಸಿದ್ದಯ್ಯ ಗಂಧದ, ಪ್ರಮುಖರಾದ ಶಿವಲಿಂಗಪ್ಪ ಕವಲೂರು, ಫಕೀರಪ್ಪ ತಳವಾರ್, ಶರಣಪ್ಪ ಸಿದ್ದರಡ್ಡಿ, ಬಾಲಪ್ಪ ತಳವಾರ್, ಗ್ರಾಮ ಲೆಕ್ಕಾಧಿಕಾರಿ ಬಸನಗೌಡ ರಾಮಶೆಟ್ಟಿ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts