ಹ್ಯಾಪಿ ಬರ್ತ್‌ಡೇ ಟೂ ಯೂ... ಝೂನಲ್ಲಿ ಸುಜಿಯ ಖುಷಿ

chimpanjee bday
Published on

ಹೈದರಾಬಾದ್: ಇಲ್ಲಿಯ ನೆಹರೂ ಝೂಲಾಜಿಕಲ್‌ ಪಾರ್ಕ್‌ನಲ್ಲಿ ಇಂದು ಸುಜಿಯ 34ನೇ ಹುಟ್ಟುಹಬ್ಬದ ಸಂಭ್ರಮ. ಕೋವಿಡ್ -19 ಬಿಕ್ಕಟ್ಟಿನಿಂದಾಗಿ ಅನುಸರಿಸಬೇಕಾದ ಸಾಮಾಜಿಕ ದೂರ ಪ್ರೋಟೋಕಾಲ್‌ಗಳನ್ನು ಗಮನದಲ್ಲಿಟ್ಟುಕೊಂಡು ಈಕೆಯ ಹುಟ್ಟುಹಬ್ಬವನ್ನು ಮೃಗಾಲಯದಲ್ಲಿ ಆಚರಿಸಲಾಯಿತು.

ಅಂದಹಾಗೆ ಈ ಸುಜಿ ಚಿಂಪಾಂಜಿ. ಮನುಷ್ಯರಂತೆಯೇ ಎಲ್ಲಾ ಗುಣಗಳನ್ನು ಹೋಲುವ ಈ ಚಿಂಪಾಂಜಿಯ 34ನೇ ಹುಟ್ಟುಹಬ್ಬವನ್ನು ಇಂದು ಆಚರಿಸಲಾಗಿದೆ.

ಮೃಗಾಲಯದ ಅಡುಗೆಮನೆಯಲ್ಲಿಯೇ ತಯಾರಿಸಿದ ಫ್ರೂಟ್‌ಕೇಕ್ ಸುಜಿಗೆ ನೀಡಲಾಯಿತು. ಇದರ ಜತೆಗೆ, ಹಣ್ಣು ಮತ್ತು ಬ್ರೆಡ್ ತಿನಿಸಲಾಯಿತು.

ಈ ಕುರಿತು ಮೃಗಾಲಯದ ಅಧಿಕೃತ ಟ್ವಿಟರ್ ಖಾತೆ ಹುಟ್ಟುಹಬ್ಬ ಆಚರಣೆಗಳ ಚಿತ್ರಗಳನ್ನು ಹಂಚಿಕೊಂಡಿದೆ.

"ಇಂದು ನಾವು ಸುಜಿಯ ಹುಟ್ಟುಹಬ್ಬವನ್ನು ಆಚರಿಸಿದೆವು. ಅವಳಿಗೆ ಇಷ್ಟವಾಗಿರುವ ಹೊಸ ಬೆಚ್ಚಗಿನ ಹೊದಿಕೆಗಳು ಮತ್ತು ರುಚಿಕರವಾದ ಹಣ್ಣು ಕೇಕ್ ನೀಡಿದೆವು ಎಂದಿದ್ದಾರೆ. ಸಹಾರಾ ಗ್ರೂಪ್‌ 2011 ರಲ್ಲಿ ಈ ಚಿಂಪಾಂಜಿಯನ್ನು ಮೃಗಾಲಯಕ್ಕೆ ಉಡುಗೊರೆಯಾಗಿ ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net