

ಬೆಟ್ಟದಪುರ: ಬೆಟ್ಟದಪುರ ಸಮೀಪದ ಕಣಗಾಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಮಕ್ಕಳ ಸಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಕ್ಕಳು ಬಜ್ಜಿ, ವಡೆ, ಬೋಂಡಾ, ಚುರುಮುರಿ, ಜ್ಯೂಸ್, ವಿವಿಧ ಬಗೆಯ ಹಣ್ಣು, ತರಕಾರಿಗಳನ್ನು ತಂದು ಮಾರಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಮುಖ್ಯಶಿಕ್ಷಕ ಎಚ್.ಪಿ.ಮುತ್ತುರಾಜ್ ಮಾತನಾಡಿ, ಮಕ್ಕಳು ಶೈಕ್ಷಣಿಕ ಚಟುವಟಿಕೆಯೊಂದಿಗೆ ಶಾಲಾ ಹಂತದಲ್ಲಿ ಸಿಗುವಂತಹ ಎಲ್ಲ ಅವಕಾಶಗಳನ್ನು ಬಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ತನ್ನದೇ ಆದ ವಿಶೇಷ ಪ್ರತಿಭೆ ಹೊಂದಿದ್ದು ಅದನ್ನು ಅನಾವರಣ ಮಾಡಿಕೊಳ್ಳಲು ಸಿಗುವಂತಹ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೈಮುನ್ನಿಸಾ, ಶಿಕ್ಷಕರಾದ ಯಧುಕುಮಾರ್, ರೂಹಿನಾ ಬಾನು, ಪೂಜಾ, ದಿವ್ಯಾ, ಕ್ಲಸ್ಟರ್ ಮಟ್ಟದ ಶಿಕ್ಷಕರು ಭಾಗವಹಿಸಿದ್ದರು.