ಹೆಗ್ಗಳ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ

15 vpt 2
Published on

ವಿರಾಜಪೇಟೆ: ವಿರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸಂಭ್ರಮದಿಂದ ಮಕ್ಕಳ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಶಿಕ್ಷಕರು ಹೂ ನೀಡುವುದರ ಮೂಲಕ ಮಕ್ಕಳನ್ನು ಸ್ವಾಗತಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಕಮಲಮ್ಮ ಮಾತನಾಡಿ, ನೆಹರು ಅವರ ಜನ್ಮ ದಿನದ ಪ್ರಯುಕ್ತ ಮಕ್ಕಳ ದಿನ ಆಚರಿಸಲಾಗುತ್ತಿದ್ದು, ಭವ್ಯ ಸಮಾಜ, ರಾಷ್ಟ್ರದ ಬೆಳವಣಿಗೆಗೆ ಮಕ್ಕಳ ಕೊಡುಗೆ ಅಪಾರವಾಗಿದೆ ಎಂದರು.

ಸಹ ಶಿಕ್ಷಕಿ ಕಮರುನ್ನಿಸ, ವಿದ್ಯಾರ್ಥಿ ನಾಯಕ ಅನಗ್, ಲಾವ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net