ಪೊಲೀಸ್​ ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಸಹಾಯ; ಅರ್ಜಿ ಸಲ್ಲಿಸಲು ಯಾವಾಗ ಕೊನೆ ದಿನ? ಇಲ್ಲಿವೆ ಪೂರ್ಣ ವಿವರ

Police
Published on

ಬೆಂಗಳೂರು: ನಗರ ಪೊಲೀಸ್​ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಧನಸಹಾಯ ನೀಡಲು ಪೊಲೀಸ್​ ಕಲ್ಯಾಣ ನಿಧಿಯಿಂದ ಅರ್ಜಿ ಆಹ್ವಾನಿಸಲಾಗಿದ್ದು, ಮಕ್ಕಳ ವಿದ್ಯಾಭ್ಯಾಸದ ಮಾಹಿತಿಯನ್ನು ಎಕ್ಸೇಲ್​ ಫಾರ್ಮೆಟ್​ನಲ್ಲಿ ಭರ್ತಿ ಮಾಡಿ ಸಾಫ್ಟ್ ಮತ್ತು ಹಾರ್ಡ್​ಕಾಪಿಯನ್ನು ಸಂಬಂಧಪಟ್ಟ ಡಿಸಿಪಿ ಕಚೇರಿ ಮುಖಾಂತರ ಅ.20ರೊಳಗೆ ಸಲ್ಲಿಸಲು ಸೂಚಿಸಲಾಗಿದೆ.

ಪದವಿ/ಸ್ನಾತಕೋತ್ತರ ಪದವಿಯಲ್ಲಿ ಹಿಂದಿನ ಪರೀಕ್ಷೆಯಲ್ಲಿ ಶೇ.60ಕ್ಕೂ ಹೆಚ್ಚಿನ ಅಂಕ ಪಡೆದಿರಬೇಕು. ಇದು ಅಂಚೆ ಶಿಕ್ಷಣ ಪದವಿಗಳಿಗೆ ಅನ್ವಯಿಸುವುದಿಲ್ಲ.

ಯಾರಿಗೆ ಎಷ್ಟು?

ಎಲ್ಲ ಪದವಿಗಳಿಗೆ 10 ಸಾವಿರ ರೂ., ಸ್ನಾತಕೋತ್ತರ ಪದವಿಗಳಿಗೆ 20 ಸಾವಿರ ರೂ., ಇಂಜಿನಿಯರಿಂಗ್​ ಸ್ನಾತಕೋತ್ತರ(ಎಂಇ, ಎಂಟೆಕ್​, ಎಲ್​ಎಲ್​ಎಂ, ಎಂ.ವಿ.ಎಸ್​) ಪದವಿಗಳಿಗೆ 30 ಸಾವಿರ ರೂ., ವೈದ್ಯಕಿಯ ಪದವಿಗಳಿಗೆ (ಎಂಬಿಬಿಎಸ್​, ಬಿಡಿಎಸ್​, ಫಾರ್ಮಾ&ಡಿ ಸಿ.ಎ) 25 ಸಾವಿರ ರೂ., ವೈದ್ಯಕಿಯ ಸ್ನಾತಕೋತ್ತರ ಪದವಿಗಳಿಗೆ(ಎಂಡಿ, ಎಂಎಸ್​, ಎಂಡಿಎಸ್​) 40 ಸಾವಿರ ರೂ. ಹಾಗೂ ಡಿಪ್ಲೋಮಾ ಕೋರ್ಸ್​ಗಳಿಗೆ 10 ಸಾವಿರ ರೂ. ಧನ ಸಹಾಯ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net