ಶಾಲೆ ಶುರು ಯಾವಾಗ? ಇಲ್ನೋಡಿ ಮಕ್ಕಳು 'ಬಾಲಕಾರ್ಮಿಕ'ರಾಗುತ್ತಿದ್ದಾರೆ...

Baalakarmik
Published on

ಯಾದಗಿರಿ: ಕರೊನಾದಿಂದ ಹೊಡೆತದಿಂದ ಶಾಲೆಗಳು ಶುರುವಾಗಲು ವಿಳಂಬವಾಗುತ್ತದೆ. ಇದರಿಂದಾಗಿ ಹಲವು ಬಡ ಮಕ್ಕಳು ಬಾಲಕಾರ್ಮಿಕರಾಗಿ ಪರಿವರ್ತಿತರಾಗಿದ್ದಾರೆ.

ಶಾಲೆಗಳೆಲ್ಲ ಬಂದ್​ ಆಗಿವೆ. ಸದ್ಯಕ್ಕಂತೂ ಶುರುವಾಗುವ ಲಕ್ಷಣಗಳು ಇಲ್ಲ. ಹೀಗಿರುವಾಗ ಯಾದಗಿರಿಯ ಹಲವು ಕಡೆಗಳಲ್ಲಿ ಸಾವಿರಾರು ಪುಟ್ಟ ಮಕ್ಕಳು ತರಕಾರಿ, ಹೂವು ಮಾರಾಟ, ಇಟ್ಟಂಗಿ ಭಟ್ಟಿ, ಹತ್ತಿಬಿಡಿಸುವುದು, ಹೋಟೆಲ್​ನಲ್ಲಿ ಕೆಲಸ ಮಾಡಲು ಶುರು ಮಾಡಿದ್ದಾರೆ. ಕುಟುಂಬದಲ್ಲಿ ಬಡತನ ಇರುವ ಮಕ್ಕಳು ಇದೀಗ ತಮ್ಮ ಕೈಲಿ ಸಾಧ್ಯವಾದಷ್ಟು ದುಡಿದು ಮನೆಗೆ ಕೊಡುತ್ತಿದ್ದಾರೆ. ಇದನ್ನೂ ಓದಿ: ನ್ಯೂಜಿಲೆಂಡ್​ನ ಮೊಟ್ಟಮೊದಲ ಭಾರತೀಯ ಮೂಲದ ಸಚಿವೆ ಪ್ರಿಯಾಂಕಾ ರಾಧಾಕೃಷ್ಣನ್​

ಕರೊನಾದಿಂದ ಪಾಲಕರು ಆರ್ಥಿಕ ಸಂಕಷ್ಟಕ್ಕೆ ನೂಕಲ್ಪಟ್ಟಿದ್ದಾರೆ. ಇದನ್ನು ಅರ್ಥ ಮಾಡಿಕೊಂಡ ಮಕ್ಕಳು ತಮ್ಮ ತಂದೆ-ತಾಯಿಯೊಂದಿಗೆ ಕೆಲಸಕ್ಕೆ ಹೋಗಲು ಶುರು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net