

ಹೊಳೆಹೊನ್ನೂರು: ದೊಡ್ಡ ಕನಸುಗಳನ್ನು ಕಾಣುವಂತೆಯೇ ನಮ್ಮ ಮಕ್ಕಳನ್ನು ಬೆಳೆಸಬೇಕು ಎಂದು ಎಂಎಲ್‌ಸಿ ಡಾ. ಧನಂಜಯ ಸರ್ಜಿ ಹೇಳಿದರು.
ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಶಾಲೆಯ 26ನೇ ವಾರ್ಷಿಕೋತ್ಸವ ಜ್ಞಾನದೀಪ ಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪಾಲಕರ ಕನಸಿಗೆ ಮಕ್ಕಳನ್ನು ಹೊಣೆ ಮಾಡಬೇಡಿ. ಮಕ್ಕಳಲ್ಲಿ ಗುರು-ಹಿರಿಯರಿಗೆ ನಮಸ್ಕರಿಸುವುದು ಅತ್ಯಂತ ಶ್ರೇಷ್ಠ ಸಂಸ್ಕಾರ ತೋರುತ್ತದೆ. ಯಾವುದೇ ಒಂದು ವಸ್ತು ಸಂಸ್ಕಾರಗೊಂಡಾಗ ಅದು ಶ್ರೇಷ್ಠ ಗುಣ ಪಡೆಯುತ್ತದೆ. ಸೀಮಿತ ಪರಿಧಿಯಾಚೆ ಆಲೋಚಿಸಲು ಮಕ್ಕಳಿಗೆ ಅವಕಾಶ ನೀಡಬೇಕು. ಗುರುವಿಗೆ ಮಾತ್ರ ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ ಕರೆದುಕೊಂಡು ಹೋಗುವ ಶಕ್ತಿ ಇದೆ. ಅಂತಹ ಗುರುವನ್ನು ಜೀವನದಲ್ಲಿ ನಿರಂತರವಾಗಿ ನೆನೆಯಬೇಕು ಎಂದರು.
ಅರಬಿಂದೋ ೌಂಡೇಶನ್ ಾರ್ ಎಜುಕೇಶನ್ ಮತ್ತು ಜ್ಞಾನದೀಪ ವಿದ್ಯಾ ಸಂಸ್ಥೆ ಅಧ್ಯಕ್ಷ ತಲವಾನೆ ಪ್ರಕಾಶ್ ಮಾತನಾಡಿ, ಕಾಲಕ್ಕೆ ತಕ್ಕಂತೆ ಬದಲಾವಣೆ ತಂದು ಮಕ್ಕಳಿಗೆ ಆಧುನಿಕ ಸೌಲಭ್ಯದೊಂದಿಗೆ ಇನ್ನಷ್ಟು ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಕೋನ ಹೊಂದಲಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಬಿ.ಎಲ್.ನೀಲಕಂಠಮೂರ್ತಿ, ಟ್ರಸ್ಟಿಗಳಾದ ಡಾ. ಪಿ.ನಾರಾಯಣ್, ಎಚ್‌ಇ.ತಾಜುದ್ದೀನ್, ಪ್ರಾಚಾರ್ಯರಾದ ಡಾ. ಕೆ.ನಾಗರಾಜ್, ಶ್ರೀಕಾಂತ್ ಎಂ.ಹೆಗಡೆ, ಹಿರಿಯ ಉಪ ಪ್ರಾಚಾರ್ಯೆ ಡಾ. ರೆಜಿ ಜೋಸ್ೆ, ಉಪ ಪ್ರಾಚಾರ್ಯೆ ವಾಣಿ ಕೃಷ್ಣಪ್ರಸಾದ್, ಶಿಕ್ಷಕರಾದ ಮಲ್ಲಿಕಾರ್ಜುನ್ ತುರವನೂರು, ಟೀನಾ ಥಾಮಸ್ ಇತರರಿದ್ದರು.