

ಉತ್ತರಪ್ರದೇಶ: ರೈಲು ನಿಲ್ದಾಣದ ಆವರಣದಲ್ಲಿ ಮಲಗಿದ್ದ ಮಗುವನ್ನು ಒದ್ದ ರೈಲ್ವೇ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.ಉತ್ತರ ಪ್ರದೇಶದ ಬಲ್ಲಿಯಾಜಿಲ್ಲಾದ ಬೆಲ್ಟಾರಾ ರೋಡ್ ರೈಲು ನಿಲ್ದಾಣದಲ್ಲಿ ನಡೆದ ಘಟನೆಯ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಈಶಾನ್ಯ ರೈಲ್ವೆ ಇಲಾಖೆ, 'ಈ ಘಟನೆ ಕುರಿತು ತಕ್ಷಣ ಕ್ರಮ ಕೈಗೊಂಡಿದ್ದೇವೆ. ಸಂಬಂಧಪಟ್ಟ ಪೇದೆಯನ್ನು ತಕ್ಷಣ ಅಮಾನತು ಮಾಡಲಾಗಿದೆ' ಎಂದು ವೈರಲ್ ವಿಡಿಯೋಗೆ ಉತ್ತರಿಸಿದ್ದಾರೆ.
ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ಸೇವಿಸಬಾರದು?
ಮಲಗಿದ್ದ ಮಗುವನ್ನು ಒದ್ದ ಕಾನ್‌ಸ್ಟೆಬಲ್ ಅನ್ನು ಈಶಾನ್ಯ ರೈಲ್ವೆಯ ವಾರಣಾಸಿ ಆರ್‌ಪಿಎಫ್ ವಿಭಾಗದ ಬಲೀಂದರ್ ಸಿಂಗ್ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಅಮಾನತು ಮಾಡಿ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಾರಣಾಸಿ ವಿಭಾಗದ ಪಿಆರ್‌ಒ ಅಶೋಕ್ ಕುಮಾರ್, ‘ಈ ಘಟನೆ ಯಾವಾಗ ನಡೆದಿದೆ ಎಂಬುದು ತಿಳಿದಿಲ್ಲ, ಆದರೆ ಘಟನೆಯ ಕುರಿತು ತನಿಖೆ ನಡೆಸಲಾಗುವುದು’ ಎಂದರು. ಮತ್ತೊಂದೆಡೆ, ಈ ಘಟನೆಗೆ ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.