ಕೋಳಿ ಮೊದಲಾ, ಮೊಟ್ಟೆ ಮೊದಲಾ?; ಮಿಲಿಯನ್​ ಡಾಲರ್​ ಪ್ರಶ್ನೆಗೆ ತಪ್ಪಾಗಿ ಉತ್ತರ ಹೇಳಿದ ಸ್ನೇಹಿತನನ್ನು ಬರ್ಬರವಾಗಿ ಕೊಲೆ ಮಾಡಿದ ಗೆಳೆಯ

Hen Egg
Published on

ನವದೆಹಲಿ: ಕೋಳಿ ಮೊದಲಾ, ಮೊಟ್ಟೆ ಮೊದಲಾ ಎಂದು ಪ್ರಶ್ನೆ ಕೇಳಿದರೆ ಯಾರು ಸಹ ಸರಿಯಾಗಿ ಉತ್ತರಿಸುವುದಿಲ್ಲ. ಕೆಲವರು ಕೋಳಿ ಮೊದಲು ಹುಟ್ಟಿದ್ದು, ಎಂದರೆ ಮತ್ತಷ್ಟು ಜನ ಮೊಟ್ಟೆ ಮೊದಲು ಬಂದಿದ್ದು ಎಂದು ಹೇಳುತ್ತಾರೆ. ಆದರೆ, ಇದೀಗ ಈ ವಿಚಾರವಾಗಿ ಸ್ನೇಹಿತರಿಬ್ಬರ ನಡುವೆ ಜಗಳವಾಗಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇಂಡೋನೇಷ್ಯಾದ ಸುಲವೆಸಿ ಪ್ರಾಂತ್ಯದ ಮುನಾ ರಿಜೆನ್ಸಿಯಲ್ಲಿ ನಡೆದಿದೆ.

ಜುಲೈ 24ರಂದು ಘಟನೆ ನಡೆದಿದ್ದು, ಮೃತರನ್ನು ಕದಿರ್ ಮಾರ್ಕಸ್ (47) ಎಂದು ಗುರುತಿಸಲಾಗಿದ್ದು, ಆರೋಪಿ ಡಿಆರ್​ ಈತನಿಗೆ 15ಕ್ಕೂ ಹೆಚ್ಚು ಬಾರಿ ಚಾಕುವಿನಿಂದು ಇರಿದು ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Murder Accused

ಈ ಕುರಿತು ಮಾತನಾಡಿರುವ ಪೊಲೀಸ್​​ ಅಧಿಕಾರಿಯೊಬ್ಬರು, ಆಗ್ನೇಯ ಸುಲವೆಸಿ ಪ್ರಾಂತ್ಯದ ಮುನಾ ರಿಜೆನ್ಸಿಯಲ್ಲಿ ಸ್ನೇಹಿತರಿಬ್ಬರು ಎಣ್ಣೆ ಪಾರ್ಟಿ ಮಾಡುತ್ತಿರುವ ವೇಳೆ ಈ ಕ್ಲಾಸಿಕ್​ ಒಗಟಿನ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಇದರಲ್ಲಿ ಒಬ್ಬರು ಕೋಳಿ ಎಂದ್ರೆ ಇನ್ನೊಬ್ಬರು ಮೊಟ್ಟೆ ಎಂದು ಉತ್ತರ ನೀಡಿದ್ದಾರೆ. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ.

ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಆರೋಪಿಯು ತನ್ನ ಸ್ನೇಹಿತನಿಗೆ ಹರಿತವಾದ ಆಯುಧದಿಂದ 15ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದಾನೆ. ಮನೆಯ ಕಾಂಪೌಂಡ್​​ನಲ್ಲಿದ್ದ ಹಾರೆಯಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಆರೋಪಿ ಹಾಗೂ ಕೊಲೆಗೆ ಬಳಸಲಾದ ಆಯುಧವನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net