

ಛತ್ತೀಸಗಢ: ವಿವಾಹಿತ ಮಹಿಳೆಯರು ಮತ್ತು ಭೂರಹಿತ ಕೃಷಿ ಕಾರ್ಮಿಕರಿಗೆ ವಾರ್ಷಿಕ ಆರ್ಥಿಕ ನೆರವು, ಕ್ವಿಂಟಲ್‌ಗೆ 3,100 ರೂ.ಗೆ ಭತ್ತ ಖರೀದಿ ಮತ್ತು ಬಡ ಕುಟುಂಬಗಳಿಗೆ 500 ರೂ.ಗೆ ಅಡುಗೆ ಅನಿಲ ಸಿಲಿಂಡರ್ ನೀಡುವುದು ಛತ್ತೀಸ್‌ಗಢದ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಗೊಂಡ ಭರವಸೆಗಳಾಗಿವೆ.
ಎರಡು ವರ್ಷಗಳಲ್ಲಿ ಖಾಲಿಯಿರುವ ಒಂದು ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು ಮತ್ತು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ರಾಜ್ಯದ ಜನರನ್ನು ಕರೆದುಕೊಂಡು ಹೋಗುವುದು ಕೂಡ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಭರವಸೆಗಳಲ್ಲಿ ಒಂದಾಗಿದೆ.
ರಾಯಪುರದಲ್ಲಿರುವ ಕೇಸರಿ ಪಕ್ಷದ ರಾಜ್ಯ ಕಚೇರಿ ಕುಶಾಭೌ ಠಾಕ್ರೆ ಪರಿಸರದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, 'ಛತ್ತೀಸ್‌ಗಢ 2023 ಮೋದಿ ಗ್ಯಾರಂಟಿ' ಶೀರ್ಷಿಕೆಯ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.
ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, "ಚುನಾವಣಾ ಪ್ರಣಾಳಿಕೆಯು ಬಿಜೆಪಿಯ ಪ್ರಣಾಳಿಕೆ ಮಾತ್ರವಲ್ಲ, ನಮಗೆ 'ಸಂಕಲ್ಪ ಪತ್ರ' ಎಂದು ಹೇಳಿದರು. 15 ವರ್ಷಗಳ ಬಿಜೆಪಿ ಆಡಳಿತದಲ್ಲಿ (2003-2018) ಛತ್ತೀಸ್‌ಗಢವನ್ನು ಹಿಂದುಳಿದ ರಾಜ್ಯದಿಂದ ಉತ್ತಮ ರಾಜ್ಯವಾಗಿ ಪರಿವರ್ತಿಸಲಾಗಿದೆ. ಈಗ ಬಿಜೆಪಿ ಪರವಾಗಿ ನಾನು ನಿಮಗೆ ಭರವಸೆ ನೀಡುತ್ತೇನೆ, ನಾವು ಅದನ್ನು ಅಭಿವೃದ್ಧಿ ಪಡಿಸುವ ಗುರಿಯೊಂದಿಗೆ ಕೆಲಸ ಮಾಡುತ್ತೇವೆ" ಎಂದರು,(ಏಜೆನ್ಸೀಸ್).