ಕಣ್ಣುಬಿಟ್ಟ ಮೂಕಾಂಬಿಕೆ ದೇವಿ ವಿಗ್ರಹ..ಕೌತುಕ ಕಣ್ತುಂಬಿಕೊಳ್ಳಲು ಭಕ್ತಸಾಗರ!

mugambigai
Published on

ಚೆನ್ನೈ: ಶಕ್ತಿ ದೇವತೆಯ ವಿಗ್ರಯದ ಕಣ್ಣುಗಳಿಂದ ಬೆಳಕು ಬಂದ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ದಿವಯನ್ವಿಲೈ ಮುಖ್ಯ ಬಜಾರ್‌ನ ಅರ್ಬುಟ ವಿನಾಯಕರ್ ದೇವಸ್ಥಾನ ಆವರಣದ ಮೂಕಾಂಬಿಕೈ ದೇವಾಲಯದಲ್ಲಿ ಈ ಅಚ್ಚರಿ ಸಂಭವಿಸಿದೆ.

ದೇವಸ್ಥಾನದ ಅರ್ಚಕ ಮುಖೇಶ್ ಭಟ್ಟಾಚಾರ್ಯ ಮಂಗಳವಾರ ಸಂಜೆ 6.40ಕ್ಕೆ ಆಗಮಿಸಿದ್ದು, ಮೂಕಾಂಬಿಕೆ ದೇವಿಯ ಇವಗ್ರಹ ಅಲಂಕರಿಸಲು ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿದ್ದರು. ಈ ವೇಳೆ ಸ್ಥಳೀಯ ಭಕ್ತ ಮುತ್ತು ಆಚಾರಿ ತನ್ನ ಪತ್ನಿಯೊಂದಿಗೆ ಆಗಮಿಸಿ ಪತ್ನಿಯ ಹೆರಿಗೆ ಚೆನ್ನಾಗಿ ಆಗಲೆಂದು ಪ್ರಾರ್ಥಿಸಿದರು.

ಆ ಸಮಯದಲ್ಲಿ ಮುತ್ತುವಿನ ಹೆಂಡತಿಯು ದೇವಿಯ ವಿಗ್ರಹದ ಕಣ್ಣುಗಳಿಂದ ಒಂದು ರೀತಿಯ ಬೆಳಕು ಬರುತ್ತಿರುವುದನ್ನು ಗಮನಿಸಿದ್ದಾರೆ. ಇದನ್ನು ಪತಿಗೆ ತಿಳಿಸಿದ ಬಳಿಕ ಪವಾಡ ಸದೃಶ ದೃಶ್ಯವನ್ನು ಕಂಡು ಆತ ಅರ್ಚಕರಿಗೆ ತಿಳಿಸಿದ್ದಾರೆ.

ಈ ಸುದ್ದಿ ಸುತ್ತಮುತ್ತಲಿನ ಗ್ರಾಮಗಳಿಗೆ ಕಾಳ್ಗಿಚ್ಚಿನಂತೆ ಹರಡಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ದೇವಿಯ ಕಣ್ಣುಗಳ ಬೆಳಕನ್ನು ಕಂಡು ಪುಳಕಿತರಾದರು. ಬಳಿಕ ರಾತ್ರಿ 10 ಗಂಟೆಗೆ ಎಂದಿನಂತೆ ದೇವಸ್ಥಾನವನ್ನು ಮುಚ್ಚಲಾಯಿತು. ಬುಧವಾರ ಮುಂಜಾನೆ 5 ಗಂಟೆಗೆ ದೇವಸ್ಥಾನ ತೆರೆದಾಗ ಆಗಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಆದರೆ, ದೇವಿಯ ವಿಗ್ರಹದ ಕಣ್ಣುಗಳು ಸಹಜವಾಗಿದ್ದ ಕಾರಣ ಅವರು ಹತಾಶರಾಗಿ ವಾಪಸ್​ ಹೋಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net