ಸಾರ್ವಕಾಲಿಕ ದಾಖಲೆಯತ್ತ ಚಿನ್ನ-ಬೆಳ್ಳಿ ಬೆಲೆ! ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂದಿನ ದರ ಪಟ್ಟಿ | Gold Price

gold
Published on

Gold Price: ದೇಶದಲ್ಲಿ ಕೇವಲ ಚಿನ್ನ ಮಾತ್ರವಲ್ಲ, ಬೆಳ್ಳಿ ಬೆಲೆ ಕೂಡ ಗಗನಕ್ಕೇರುತ್ತಿವೆ. ಬೆಳ್ಳಿ ಸಾರ್ವಕಾಲಿಕ ದಾಖಲೆಗಳನ್ನು ನಿರ್ಮಿಸುತ್ತಿದ್ದರೆ, ಚಿನ್ನವು ಮಧ್ಯಮ ವರ್ಗದ ಜನರಿಂದ ದೂರ ಸರಿದಿದೆ.

ರೂಪಾಯಿ ದುರ್ಬಲಗೊಳ್ಳುವುದರಿಂದ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೆಚ್ಚಾಗುತ್ತಿವೆ. ಇಂದು (ಸೆ.29) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ 920 ರೂ. ಹೆಚ್ಚಾಗಿದೆ. ಇನ್ನು 22 ಕ್ಯಾರೆಟ್ ಗೋಲ್ಡ್ ಬೆಲೆ 850 ರೂ. ಏರಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವೂ ಹೆಚ್ಚಾಗಿದೆ. ಒಂದು ಔನ್ಸ್ ಚಿನ್ನದ 57 ಡಾಲರ್ ಆಗಿದೆ. ಇದರೊಂದಿಗೆ, ಪ್ರಸ್ತುತ ಒಂದು ಔನ್ಸ್ ಚಿನ್ನವು 3,817 ಡಾಲರ್‌ಗಳಲ್ಲಿ ವಹಿವಾಟು ನಡೆಸುತ್ತಿದೆ.

ಮತ್ತೊಂದೆಡೆ, ಬೆಳ್ಳಿಯ ಬೆಲೆಯೂ ಆಕಾಶದತ್ತ ಮುಖಮಾಡಿದೆ. ಇಂದು ಒಂದೇ ದಿನ, ಕೆಜಿ ಬೆಳ್ಳಿ ಬೆಲೆ 1,000 ರೂ. ಹೆಚ್ಚಾಗಿದೆ. ಇದು ಸಾರ್ವಕಾಲಿಕ ದಾಖಲೆಯನ್ನು ದಾಖಲಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಮುನ್ಸೂಚನೆಯನ್ನು ನೀಡಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ

  • ನವದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,06,850 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,16,550 ರೂ. ಆಗಿದೆ.
  • ಮುಂಬೈ, ಬೆಂಗಳೂರು, ಚೆನ್ನೈ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,06,700 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,16,400 ರೂ. ಆಗಿದೆ.
  • ಇನ್ನು ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣದಲ್ಲಿ, 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,06,700 ರೂ. ಇದ್ದರೆ, 24 ಕ್ಯಾರೆಟ್ ಬೆಲೆ 1,16,400 ರೂ. ಆಗಿದೆ.

ಬೆಳ್ಳಿ ಬೆಲೆ 1,000 ರೂ. ಹೆಚ್ಚಳ

  • ದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,50,000 ರೂ. ಆಗಿದೆ.
  • ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,60,000ರೂ. ಆಗಿದೆ.
  • ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,60,000 ರೂ. ಇದೆ,(ಏಜೆನ್ಸೀಸ್).

ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net