ನಮಸ್ಕಾರ ಹೇಳುವ ಮೊದಲೇ ವಿದಾಯ! ಈ ಮೂವರಲ್ಲಿ ಒಬ್ಬರಿಗೆ 'ಬಿಗ್' ಮನೆಯಿಂದ ಗೇಟ್​ಪಾಸ್​? | BBK 12

ವಿಜಯವಾಣಿ
Published on

BBK 12: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ (Bigg Boss Kannada) ಸೀಸನ್​ 12ಕ್ಕೆ ಇದೀಗ ಅದ್ಧೂರಿ ಚಾಲನೆ ಸಿಕ್ಕಿದ್ದು, ಎಂದಿನಂತೆ ಕಾರ್ಯಕ್ರಮವನ್ನು ನಟ ಸುದೀಪ್​ ಅವರೇ ನಡೆಸಿಕೊಡಲಿದ್ದಾರೆ. ವಿವಾದಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುವ ಈ ಕಾರ್ಯಕ್ರಮದ 12ನೇ ಆವೃತ್ತಿಗೆ ಒಟ್ಟು 19 ಮಂದಿ ದೊಡ್ಮನೆಯನ್ನು ಪ್ರವೇಶಿಸಿದ್ದಾರೆ.

ನಟ ಸುಧೀ, ಮಂಜು ಭಾಷಿಣಿ, ರಕ್ಷಿತಾ, ಗಿಲ್ಲಿ ನಟ, ಚಂದ್ರಪ್ರಭಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜನಪ್ರಿಯತೆ ಪಡೆದುಕೊಂಡ ಮುಖಗಳೇ ಈ ಬಾರಿಯ ಬಿಗ್ ಬಾಸ್​ 12ಕ್ಕೆ ಎಂಟ್ರಿಕೊಟ್ಟಿದ್ದಾರೆ. 'ಬಿಗ್' ಮನೆಗೆ ಪ್ರವೇಶಿಸಿ ಇನ್ನೂ 24 ಗಂಟೆಗಳೂ ಕಳೆದಿಲ್ಲ! ಅದಾಗಲೇ ದೊಡ್ಮನೆ ಮಂದಿಗೆ ಸಖತ್ ಟ್ವಿಸ್ಟ್​ ಒಂದು ಎದುರಾಗಿದೆ.

ಒಬ್ಬರನೊಬ್ಬರು ಪರಸ್ಪರ ಪರಿಚಯ ಮಾಡಿಕೊಳ್ಳುವ ಮೊದಲೇ ಬಿಗ್ ಬಾಸ್,​ ಮನೆ ಮಂದಿಗೆಲ್ಲ ಶಾಕ್​ ಕೊಟ್ಟಿದ್ದಾರೆ. ಹಾಯ್ ಎಂದು ಹೇಳುವ ಮುನ್ನ ಒಬ್ಬರಿಗೆ ಇಂದು ಗುಡ್​ಬೈ ಹೇಳುವ ಸಮಯ ಎಂದಿದ್ದಾರೆ. ಈ ಕುರಿತಂತೆ 19 ಸ್ಪರ್ಧಿಗಳು ಚರ್ಚಿಸಿ, ಒಮ್ಮತದಿಂದ ಯಾರು ಮನೆಯಿಂದ ಹೊರ ಹೋಗಬೇಕು ಎಂಬುದನ್ನು ನಿರ್ಧರಿಸಲು ಬಿಗ್ ಬಾಸ್​ ಸೂಚಿಸಿದ್ದಾರೆ. ಇಂದು ಹೊರಬಂದಿರುವ ಮೊದಲ ಪ್ರೋಮೋ ಪ್ರಕಾರ, ಮನೆ ಮಂದಿಯೆಲ್ಲ ಸೇರಿ ರಕ್ಷಿತಾ ಶೆಟ್ಟಿ, ಸ್ಪಂದನಾ ಮತ್ತು ಮಲ್ಲು ನಿಪಾನಲ್​ ಮೂವರಲ್ಲಿ ಒಬ್ಬರ ಹೆಸರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚಿಸುತ್ತಿರುವುದು ಕಂಡುಬಂದಿದೆ.

ದೊಡ್ಮನೆ ಪ್ರವೇಶಿಸಿದ 19 ಸ್ಪರ್ಧಿಗಳಿವರು

  • ಕಾಕ್ರೋಚ್ ಸುಧೀ (ಖಳನಟ)
  • ಜಾಹ್ನವಿ (ನಿರೂಪಕಿ)
  • ಧನುಷ್ ಗೌಡ (ಗೀತ ಸೀರಿಯಲ್ ನಾಯಕ)
  • ಗಿಲ್ಲಿ (ಹಾಸ್ಯ ನಟ)
  • ರಾಶಿಕ ಶೆಟ್ಟಿ (ನಟಿ)
  • ಅಶ್ವಿನಿ ಗೌಡ (ಕರವೇ ರಾಜ್ಯ ಘಟಕ ಅಧ್ಯಕ್ಷೆ)
  • ಕಾವ್ಯ ಶೈವ (ಕೊತ್ತಲವಾಡಿ ನಟಿ)
  • ಆರ್. ಜೆ. ಅಮಿತ್ (ರೇಡಿಯೋ ಜಾಕಿ)
  • ಡಾಗ್ ಸತೀಶ್
  • ಮಂಜು ಭಾಷಿಣಿ (ಕಿರುತೆರೆ ನಟಿ)
  • ಸ್ಪಂದನ ಸೋಮಣ್ಣ (ನಟಿ)
  • ಅಭಿಷೇಕ್ ಶ್ರೀಕಾಂತ್ (ನಟ)
  • ಮಲ್ಲು ನಿಪಾನಲ್ (ಗಾಯಕ)
  • ಚಂದ್ರಪ್ರಭಾ (ಹಾಸ್ಯ ನಟ)
  • ರಕ್ಷಿತಾ ಶೆಟ್ಟಿ (ಸೋಷಿಯಲ್ ಮೀಡಿಯಾ)
  • ಮಲ್ಲಮ್ಮ (ಸೋಷಿಯಲ್ ಮೀಡಿಯಾ)
  • ದ್ರುವಂತ್ ತಲ್ವಾರ್​ (ನಟ)
  • ಅಶ್ವಿನಿ (ನಟಿ)
  • ಕರಿಬಸಪ್ಪ (ಬಾಡಿಬಿಲ್ಡರ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net