ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ! ಕಳೆದ 4 ದಿನಗಳಲ್ಲಿ 3000 ರೂ. ಹೆಚ್ಚಳ; ಹೀಗಿದೆ ಇಂದಿನ ದರ | Gold Rates

ವಿಜಯವಾಣಿ (1)
Published on

Gold Rates: ಚಿನ್ನ ಚಿಂತೆ ಹೆಚ್ಚಿಸಿದೆ ಇನ್ನ! ಈ ಮಾತಿನಲ್ಲಿ ಯಾವುದೇ ಅನುಮಾನವಿಲ್ಲ. ಕಾರಣ, ದಿನ ಕಳೆದಂತೆ ಚಿನ್ನದ ಬೆಲೆ ದುಪ್ಪಟ್ಟಾಗುತ್ತಿದೆಯೇ ಹೊರತು ಇಳಿಕೆಯತ್ತ ಮುಖ ಮಾಡುತ್ತಿಲ್ಲ. ಇದು ಚಿನ್ನದಂತ ಗ್ರಾಹಕರನ್ನು ಕೊಳ್ಳುವಿಕೆಯಿಂದ ದೂರ ಉಳಿಯುವಂತೆ ಮಾಡುತ್ತಿದೆ. ದಸರಾ, ದೀಪಾವಳಿ ಹಾಗೂ ಮದುವೆ ಸೀಸನ್​ಗಳಲ್ಲಿ ಕೈಬೀಸಿ ಕರೆಯಬೇಕಿದ್ದ ಚಿನ್ನವೇ ಇದೀಗ ಖರೀದಿದಾರರನ್ನು ಚಿನ್ನ ಎಂದರೆ ಏನು ಎಂದು ಪ್ರಶ್ನಿಸುವಂತೆ ಮಾಡಿದೆ.

ಕೇವಲ ಚಿನ್ನ ಮಾತ್ರವಲ್ಲ, ಬೆಳ್ಳಿ ಬೆಲೆಗಳು ಕೂಡ ಗಗನಕ್ಕೇರುತ್ತಿವೆ. ಹಬ್ಬದ ಸಮಯದಲ್ಲಿ ಚಿನ್ನದ ಬೆಲೆಗಳು ನೂರಾರು ರೂ. ಅಲ್ಲ! ದಿನದಿಂದ ದಿನಕ್ಕೆ ಸಾವಿರಾರು ರೂಪಾಯಿ ಏರಿಕೆಯಾಗುತ್ತಿದೆ. ಇದರೊಂದಿಗೆ, ಚಿನ್ನದ ದರವು ಸಾರ್ವಕಾಲಿಕ ದಾಖಲೆಗಳನ್ನು ನಿರ್ಮಿಸುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನ 3,000 ಡಾಲರ್​ ದಾಟಿದಾಗ, ದೇಶದಲ್ಲಿ ಚಿನ್ನದ ಬೆಲೆಗಳು ದುಬಾರಿ ಆಗುತ್ತಿವೆ.

ಕಳೆದ 4 ದಿನಗಳಲ್ಲಿ 3,000 ರೂ. ಏರಿಕೆ

ಇತ್ತೀಚೆಗೆ, ಒಂದು ಔನ್ಸ್ ಚಿನ್ನ 4,000 ಡಾಲರ್ ತಲುಪಿತು. ಇದು ಪ್ರಸ್ತುತ 3,865 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ. ಅಮೆರಿಕದಲ್ಲಿ ಬಡ್ಡಿದರ ಕಡಿತದ ನಿರೀಕ್ಷೆಗಳು ಸುರಕ್ಷಿತ ಚಿನ್ನದ ಬೇಡಿಕೆಯನ್ನು ಹೆಚ್ಚಿಸಿವೆ. ಇದರೊಂದಿಗೆ, ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಗಳನ್ನು ದಾಖಲಿಸುತ್ತಿದೆ. ಇಂದು (ಸೆ.30) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,420 ರೂ. ಏರಿಕೆಯಾಗಿದ್ದು, 22 ಕ್ಯಾರೆಟ್ 1,300 ರೂ. ಹೆಚ್ಚಾಗಿದೆ. ಇದರೊಂದಿಗೆ, ಕಳೆದ 4 ದಿನಗಳಲ್ಲಿ ಚಿನ್ನದ ಬೆಲೆ ಸುಮಾರು 3,000 ರೂ. ಜಾಸ್ತಿಯಾಗಿದೆ ಮತ್ತೊಂದೆಡೆ, ಬೆಳ್ಳಿಯ ಬೆಲೆ ಕೆಜಿಗೆ 1,000 ರೂ. ಹೆಚ್ಚಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ

  • ನವದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,08,600 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,18,460 ರೂ. ಆಗಿದೆ.
  • ಮುಂಬೈ, ಬೆಂಗಳೂರು, ಚೆನ್ನೈ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,08,450 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,18,310 ರೂ. ಆಗಿದೆ.
  • ಇನ್ನು ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣದಲ್ಲಿ, 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,08,450 ರೂ. ಇದ್ದರೆ, 24 ಕ್ಯಾರೆಟ್ ಬೆಲೆ 1,18,310 ರೂ. ಆಗಿದೆ.

ಬೆಳ್ಳಿ ಬೆಲೆ 1,000 ರೂ. ಹೆಚ್ಚಳ

  • ದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,51,000 ರೂ. ಆಗಿದೆ.
  • ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,61,000 ಆಗಿದೆ.
  • ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,61,000 ರೂ. ಇದೆ,(ಏಜೆನ್ಸೀಸ್).

ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net