

ಎಚ್.ಡಿ.ಕೋಟೆ: ಆಫ್ರಿಕಾದ ಐವರಿಕೋಸ್ಟ್‌ನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದ ಟೈಗರ್ ಬ್ಲಾಕ್ ನಿವಾಸಿ ಎಫ್ರಾಯಮ್ ಅವರ ಕುಟುಂಬದವರಿಗೆ ಮೈಸೂರಿನ ಶೆವರನ್ ಲ್ಯಾಬೋರೇಟರಿಸ್ ಸಂಸ್ಥೆ ವತಿಯಿಂದ ಇತ್ತೀಚೆಗೆ 97,500 ರೂ. ಸಹಾಯಧನವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಹಸ್ತಾಂತರಿಸಿದರು.
ತಾಲೂಕಿನ ಟೈಗರ್ ಬ್ಲಾಕ್ ಗ್ರಾಮದ ಅಮಿತ್ ಮುಮಟ ದಂಪತಿ ಪುತ್ರ ಎಫ್ರಾಯಮ್ ಆಫ್ರಿಕಾ ದೇಶಕ್ಕೆ ಗಿಡಮೂಲಿಕೆ ವ್ಯಾಪಾರಕ್ಕೆ ತೆರಳಿದ್ದು, ಅವರಿಗೆ ಡೆಂೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಫ್ರಿಕಾದ ಐವರಿಕೋಸ್ಟ್‌ನಲ್ಲಿರುವ ಸೆಂಟರ್ ಹಾಸ್ಪಿಟಲ್ ಮತ್ತು ಯೂನಿವರ್ಸಿಟೇರ್ ಡಿ.ಅಂಗ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.
ಆಫ್ರಿಕಾದಿಂದ ಟೈಗರ್ ಬ್ಲಾಕ್ ಗ್ರಾಮಕ್ಕೆ ಮೃತದೇಹ ತರಿಸುವುದಕ್ಕೆ, ಆ ವೆಚ್ಚ ಭರಿಸುವುದಕ್ಕೆ ಕುಟುಂಬಸ್ಥರು ಬಹಳ ಕಷ್ಟ ಎದುರಿಸಿದ್ದರು. ಅವರ ಕುಟುಂಬಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಸಹಾಯಧನ ನೀಡಲಾಗಿದೆ ಎಂದು ತಿಳಿಸಿದರು.
ಮಾನವಸಂಪನ್ಮೂಲ ಅಧಿಕಾರಿಗಳಾದ ಗಂಗಾಧರ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನಾರಾಯಣಸ್ವಾಮಿ, ಕಂದಾಯ ಅಧಿಕಾರಿ ವಿಶ್ವನಾಥ್, ಗ್ರಾಮ ಲೆಕ್ಕಾಧಿಕಾರಿ ದಿವ್ಯಾ, ಗ್ರಾಮ ಪಂಚಾಯಿತಿ ಸದಸ್ಯ ಇವಾನ್‌ರಾಜ್, ಗ್ರಾಮದ ಮುಖಂಡರಾದ ದೇವದಾಸ್, ಮೀನ್‌ರಾಜ್ ಇತರರಿದ್ದರು.