

ಬೆಂಗಳೂರು: ಸದಾಶಿವನಗರ ನಿವಾಸಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಇನ್ಫಿನಿಟಿ ಲರ್ನ್ ಅಕಾಡೆಮಿಯಿಂದ ಕರೆ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡು ಆನ್‌ಲೈನ್ ತರಗತಿ ನಡೆಸುವುದಾಗಿ ಹೇಳಿದ್ದ.
ತರಗತಿ ಇಷ್ಟ ಆಗಲಿಲ್ಲ ಎಂದರೆ ಹಣ ರಿಂಡ್ ಮಾಡುವುದಾಗಿ ಭರವಸೆ ನೀಡಿದ್ದ. ಇದಕ್ಕೆ ಒಪ್ಪಿಕೊಂಡ ದೂರುದಾರ, 4ನೇ ತರಗತಿ ಓದುತ್ತಿದ್ದ ಮಗನಿಗೆ ಆನ್‌ಲೈನ್‌ನಲ್ಲಿ ತರಗತಿ ಕೊಡಿಸುವ ಸಲುವಾಗಿ 2 ವರ್ಷದ ಕೋರ್ಸ್‌ಗೆ 29 ಸಾವಿರ ರೂ. ಪಾವತಿಸಿದ್ದರು.
ಆನ್‌ಲೈನ್ ಕ್ಲಾಸ್ ಇಷ್ಟವಾಗದ ಕಾರಣಕ್ಕೆ ತರಗತಿ ರದ್ದು ಮಾಡಿ ಹಣ ರಿಂಡ್‌ಗೆ ಅರ್ಜಿ ಸಲ್ಲಿಸಿದ್ದರು. ವಂಚಕರು ತರಗತಿಯನ್ನೂ ಮಾಡದೆ ಹಣವನ್ನು ವಾಪಸ್ ಕೊಡಲು ಮೋಸ ಮಾಡಿದ್ದಾರೆ.
ಈ ಕುರಿತು ನೊಂದ ವ್ಯಕ್ತಿ ಕೇಂದ್ರ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.