ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ: ರಸ್ತೆಗಿಳಿದು, ಗಿಡ-ಮರಗಳನ್ನು ತುಂಡರಿಸಿ ಪುಂಡಾಟ

Elephant
Published on

ಬೆಳ್ತಂಗಡಿ: ಚಿಕ್ಕಮಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಚಾರ್ವಡಿ ಘಾಟಿಯಲ್ಲಿ ಮಂಗಳವಾರ ಮಧ್ಯರಾತ್ರಿ ಒಂಟಿ ಸಲಗ ರಸ್ತೆಗಿಳಿದು, ಗಿಡ-ಮರಗಳನ್ನು ತುಂಡರಿಸಿ ಪುಂಡಾಟ ನಡೆಸಿದೆ.

ಬೆಳ್ತಂಗಡಿ ವ್ಯಾಪ್ತಿಯ 8ನೇ ತಿರುವಿನಲ್ಲಿ ವಾಹನ ಸವಾರ ಆರಿಫ್ ಎಂಬುವರು ಮೊಬೈಲ್​ನಲ್ಲಿ ಆನೆ ಓಡಾಟದ ದೃಶ್ಯ ಸೆರೆ ಹಿಡಿದಿದ್ದಾರೆ. ಬೆಳ್ತಂಗಡಿ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಲಗವನ್ನು ಕಾಡಿಗಟ್ಟುವಲ್ಲಿ ಶ್ರಮ ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net