ಕೈ ಹಿಡಿದು ಕೆಲಸ ಮಾಡಿಸಿಕೊಳ್ಳುವುದು ಚರಂತಿಮಠ ಶಕ್ತಿ

ಬಾಗಲಕೋಟೆ ತಾಲೂಕಿನ ರಾಂಪೂರ ಗ್ರಾಮದಲ್ಲಿ ಶನಿವಾರ ಸಂಜೆ ಬಿಜೆಪಿ ಅಭ್ಯರ್ಥಿ ಪರವಾಗಿ ಮಾಜಿ ಸಿಎಂ, ಜಗದೀಶ ಶೆಟ್ಟರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಮಾಜಿ ಸಚಿವ ಕಳಕಪ್ಪ ಬಂಡಿ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಅಭ್ಯರ್ಥಿ ವೀರಣ್ಣ ಚರಂತಿಮಠ ಮತ್ತಿತರರು ಇದ್ದರು.
ಬಾಗಲಕೋಟೆ ತಾಲೂಕಿನ ರಾಂಪೂರ ಗ್ರಾಮದಲ್ಲಿ ಶನಿವಾರ ಸಂಜೆ ಬಿಜೆಪಿ ಅಭ್ಯರ್ಥಿ ಪರವಾಗಿ ಮಾಜಿ ಸಿಎಂ, ಜಗದೀಶ ಶೆಟ್ಟರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಮಾಜಿ ಸಚಿವ ಕಳಕಪ್ಪ ಬಂಡಿ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಅಭ್ಯರ್ಥಿ ವೀರಣ್ಣ ಚರಂತಿಮಠ ಮತ್ತಿತರರು ಇದ್ದರು.
Published on
ಬಾಗಲಕೋಟೆ: ಸರ್ಕಾರದ ಮಟ್ಟದಲ್ಲಿ ಪಟ್ಟು ಹಿಡಿದು ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಳ್ಳುವ ತಾಕತ್ತು ಮತ್ತು ಶಕ್ತಿ ವೀರಣ್ಣ ಚರಂತಿಮಠ ಅವರಿಗೆ ಚನ್ನಾಗಿ ಗೊತ್ತಿದೆ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ಹೇಳಿದರು.
ತಾಲೂಕಿನ ರಾಂಪೂರ ಗ್ರಾಮದಲ್ಲಿ ಶನಿವಾರ ಸಂಜೆ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಸಿಎಂ ಆಗಿ ಕೆಲಸ ಮಾಡಿದ್ದೇನೆ. ಆಗ ಶಾಸಕರಾಗಿದ್ದ ಚರಂತಿಮಠ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಮುಖ್ಯಮಂತ್ರಿ ಇರಲಿ, ಮಂತ್ರಿ ಇರಲಿ ಅವರ ಕೈಹಿಡಿದು ಕೆಲಸ ಮಾಡಿಸಿಕೊಳ್ಳುವುದು ಅವರಿಗೆ ಗೊತ್ತಿದೆ ಎಂದರು.
ರಾಜ್ಯದಲ್ಲಿ ಅನೇಕ ಶಾಸಕರು ವೀರಣ್ಣ ಚರಂತಿಮಠ ಅವರ ಕೆಲಸ ಕಾರ್ಯಗಳನ್ನು ನೋಡಿ ಕಲಿಯಬೇಕಿದೆ. ಅವರು ಕ್ಷೇತ್ರಕ್ಕೆ ಏನು ಬೇಕು ಎನ್ನುವುದನ್ನು ಅಧ್ಯಯನ ಮಾಡಿಕೊಂಡು ಸರ್ಕಾರದ ಮೇಲೆ ಒತ್ತಡ ಹಾಕಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಕಳೆದ ಮೂರು ವರ್ಷ ರಾಜ್ಯದ ಜೊತೆ ಬಾಗಲಕೋಟೆ ಕ್ಷೇತ್ರದಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆದಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.
ಮಾ. ೨೩ ರಂದು ನಾಮಪತ್ರ ಸಲ್ಲಿಸುವಾಗಿ ನಾನು ಭಾಗವಹಿಸಿದ್ದೆ. ಅಂದು ಸೇರಿದ್ದ ಜನರನ್ನು ನೋಡಿದರೆ ಕ್ಷೇತ್ರದ ಮತದಾರರು ಚರಂತಿಮಠ ಅವರ ಕೈಬಲ ಪಡಿಸುವ ವಿಶ್ವಾಸ ವೃದ್ಧಿಸಿದೆ. ಹೀಗಾಗಿ ಅವರು ಅತ್ಯಂತ ಹೆಚ್ಚು ಮತಗಳ ಅಂತರದಿ0ದ ಗೆದ್ದು ಬರುತ್ತಾರೆ.
ಮಾಜಿ ಸಚಿವ ಕಳಕಪ್ಪ ಬಂಡಿ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ಶಿಲ್ಪಾ ಕುಂದರವಾಡ, ಸುರೇಶ ಕೊಣ್ಣೂರ, ನಿಂಗಪ್ಪ ಕೆಂಜೋಡಿ, ಗೀತಾ ಚೌದರಿ, ಸುವರ್ಣ ಬಿರಾದಾರ ಮತ್ತಿತರರು ಮತಯಾಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net