ದೃಷ್ಟಿ ಬದಲಾದರೆ ಜಗತ್ತೇ ಬದಲಾದೀತು | Change Vision

ವಿಜಯವಾಣಿ-1-6
Published on

ಜಗತ್ತಿನಲ್ಲಿ ನಾವು ಅನೇಕ ಜನರನ್ನು ನೋಡುತ್ತೇವೆ, ಅವರಲ್ಲಿ ಬಹುಜನರು ಜಗಳವಾಡುತ್ತಲೇ ಇರುತ್ತಾರೆ. ಎಲ್ಲಿಯ ತನಕ ನಮ್ಮ ದೃಷ್ಟಿಕೋನ ಬದಲಾಗುವುದಿಲ್ಲವೋ (Change Your Vision) ಅಲ್ಲಿಯ ತನಕವೂ ಒಬ್ಬರ ಮೇಲೆ ಇನ್ನೊಬ್ಬರು, ಇನ್ನೊಬ್ಬರ ಮೇಲೆ ಮತ್ತೊಬ್ಬ ಕೇವಲ ದೂರನ್ನು ಹೇಳುತ್ತಾ ಜೀವನವನ್ನು ಸಾಗಿಸುತ್ತಾರೆ.

50ರ ಮಧ್ಯ ವಯಸ್ಸಿನ ಮಹಿಳೆ ಒಬ್ಬಳು ಬಂದು ಕೇಳುತ್ತಾಳೆ: ‘ಸ್ವಾಮೀಜಿ, ನಮಗೆ ನಿಮ್ಮ ಆಶೀರ್ವಾದ ಬೇಕಿದೆ. ಈ ಪತಿಯ ಜೊತೆ ನಾನಿರಲು ಸಾಧ್ಯವಿಲ್ಲ. ನನಗೆ ಡೈವೋರ್ಸ್ ಬೇಕಾಗಿದೆ ದಯವಿಟ್ಟು ನೀವು ನನ್ನನ್ನು ಆಶೀರ್ವದಿಸಿ.’ ಈಗ ಡೈವೋರ್ಸ್​ಗೂ ಆಶೀರ್ವಾದದ ಅವಶ್ಯಕತೆ ಇದೆ. ಆಗ ಸ್ವಾಮೀಜಿ, ‘ನೀನು ವಿಚ್ಛೇದನ ತೆಗೆದುಕೊಳ್ಳುವುದರಿಂದ ಅಥವಾ ತೆಗೆದುಕೊಳ್ಳದೆ ಇರುವುದರಿಂದ ನನಗೆ ಯಾವ ನಷ್ಟವೂ ಆಗುವುದಿಲ್ಲ, ಮದುವೆಯ ವಯಸ್ಸಿಗೆ ಬಂದಿರುವ ನಿನ್ನ ಮಕ್ಕಳಿದ್ದಾರೆ. ಅವರಿಗೆ ನೀವೇನು ಮಾರ್ಗದರ್ಶನವನ್ನು ನೀಡುತ್ತೀರಿ, ಮುರಿದುಹೋದ ಸಂಸಾರ, ಮುರಿದುಹೋದ ಮನೆಯಿಂದ ಬಂದಂತಹ ಮಕ್ಕಳು ಎಂಬುದನ್ನು ತೋರಿಸುತ್ತೀರಿ. ಗಮನಿಸಿ, ಜೀವನದಲ್ಲಿ ಸಹನೆ ಬೇಕು, ತಿತಿಕ್ಷೆ ಬೇಕು, ಸಮಸ್ಯೆಗಳು ಪ್ರತಿಯೊಬ್ಬರಿಗೂ ಕೂಡ ಬರುತ್ತವೆ, ಅದನ್ನು ಬುದ್ಧಿವಂತಿಕೆಯಿಂದ ಎದುರಿಸುವ ಶಕ್ತಿಯನ್ನು ನಾವು ಪಡೆಯಬೇಕು, ಬೆಳೆಸಿಕೊಳ್ಳಬೇಕು. ಯಾವಾಗ ನಾವು ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುತ್ತೇವೋ ನಮ್ಮ ಜೀವನ ಬದಲಾಗುತ್ತದೆ. ನಮ್ಮ ದೃಷ್ಟಿ ಬದಲಾಯಿತೋ ನಮ್ಮ ಜಗತ್ತೇ ಬದಲಾಗುತ್ತದೆ’ ಎಂದರು.

ಕೇವಲ ಜಗತ್ತಿನಲ್ಲಿ ಹುಟ್ಟುವುದು, ವಿಷಯಗಳನ್ನು ಭೋಗಿಸುವುದು, ಮತ್ತೊಬ್ಬರ ಜೊತೆ ಹೊಡೆದಾಟ, ಬಡಿದಾಟ ಒಂದು ದಿವಸ ಇಲ್ಲವಾಗುವುದು, ಇದು ಮಾತ್ರ ಜೀವನವೇ, ಇದಕ್ಕಿಂತಲೂ ಹೆಚ್ಚಿನದು ಏನಾದರೂ ಈ ಜಗತ್ತಿನಲ್ಲಿದೆಯೇ? ನಾವು ಸ್ವಲ್ಪ ವಿಚಾರವನ್ನು ಮಾಡುವ ಅವಶ್ಯಕತೆ ಇದೆ. ಪರಮಾತ್ಮ ನಮ್ಮನ್ನು ಏತಕ್ಕಾಗಿ ಸೃಷ್ಟಿ ಮಾಡಿದ್ದಾನೆ? ಯಾವತ್ತು ನಾವು ನಮ್ಮ ತಪ್ಪು ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುತ್ತೇವೋ, ಆವಾಗ ನಮ್ಮಿಂದ ಕೇವಲ ಈ ಜಗತ್ತಿನಲ್ಲಿ ಸುಗಂಧ ಹರಡಲು ಆರಂಭವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net