ಬಹುಕೋಟಿ ಅವ್ಯವಹಾರ; ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ 14 ದಿನಗಳ ನ್ಯಾಯಾಂಗ ಬಂಧನ

Chandrababu Naidu
Published on

ಅಮರಾವತಿ: ಕೌಶಲ್ಯಭಿವೃದ್ದಿ ನಿಗಮದಲ್ಲಿನ ಬಹುಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಐಡಿ ವಶದಲ್ಲಿರುವ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ನ್ಯಾಯಾಲಯ 14ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಭಾನುವಾರ ಬೆಳಗ್ಗೆ ವಿಜಯವಾಡದಲ್ಲಿರುವ ಎಸಿಬಿ ನ್ಯಾಯಾಲಯಕ್ಕೆ ಅವರನ್ನು ತನಿಖಾ ತಂಡ ಹಾಜರುಪಡಿಸಿತ್ತು. ಟಿಡಿಪಿ ಮುಖ್ಯಸ್ಥರ ತಂಡವು ಎನ್ ಚಂದ್ರಬಾಬು ನಾಯ್ಡು ವಿರುದ್ಧ ಯಾವುದೇ ಜಾಮೀನು ರಹಿತ ವಾರಂಟ್ ಇಲ್ಲ ಎಂದು ಹೇಳಿಕೊಂಡಿದ್ದು, ಬಂಧನ ಅಕ್ರಮವಾಗಿದೆ ಆರೋಪಿಸಿತ್ತು. ಜಾಮೀನು ರಹಿತ ಸೆಕ್ಷನ್ ಸಮರ್ಥನೀಯವಲ್ಲ ಎಂದು ಕರೆದ ನ್ಯಾಯಾಧೀಶರು ಅರ್ಜಿಯನ್ನು ವಜಾಗೊಳಿಸಿ 14ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

chandraBabu Naidu

ಚಂದ್ರಬಾಬು ನಾಯ್ಡು ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) 34 ಮತ್ತು 37 ಜೊತೆಗೆ ಸೆಕ್ಷನ್ 120(b), 166, 167, 418, 420, 465, 468, 201, ಮತ್ತು 109 ಅಡಿಯಲ್ಲಿ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಅಡಿಯಲ್ಲಿ ಆರೋಪವನ್ನೂ ಹೊರಿಸಲಾಗಿದೆ.

ಚಂದ್ರಬಾಬು ಅವರನ್ನು ರಾಜಮಂಡ್ರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಈ ತಿಂಗಳ 22ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ ಎಂದು ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net