More

    ಬಿಜೆಪಿ ಸರ್ಕಾರದ ನೀತಿಗಳು ಶ್ರೀಮಂತರಿಗೆ ಮೀಸಲಾಗಿದೆ, ಬಡವರಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ: ಪ್ರಿಯಾಂಕ ಗಾಂಧಿ

    ಜೈಪುರ: ವರ್ಷಾಂತ್ಯದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತರೂಢ ಕಾಂಗ್ರೆಸ್​ ಮತ್ತೊಮ್ಮೆ ಗದ್ದುಗೆ ಏರಬೇಕೆಂಬ ಹಂಬಲದಲ್ಲಿ ಬಿಜೆಪಿ ವಿರುದ್ಧ ತನ್ನ ವಾಗ್ದಾಳಿಯನ್ನು ಮುಂದುವರೆಸಿದೆ.

    ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್​ ಪೈಲಟ್​ ಪ್ರತಿನಿಧಿಸುವ ಟೋಂಕ್​ ವಿಧಾನಸಭಾ ಕ್ಷೇತ್ರದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕ ಗಾಂಧಿ ವಾದ್ರಾ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತವೂ ಕೇವಲ ಶ್ರೀಮಂತರಿಗೆ ಮಾತ್ರ ಉಪಯೋಗವಾಗುತ್ತಿದೆ. ಇದರಿಂದ ಬಡವರಿಗೆ ಯಾವುದೇ ಲಾಭವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸಕ್ಕೆ ಹೋದಾಗಲೆಲ್ಲಾ ತಮ್ಮ ಉದ್ಯಮಿ ಮಿತ್ರರಿಗಾಗಿ ಒಪ್ಪಂದಗಳನ್ನು ಮಾಡಿಕೊಂಡು ಬರುತ್ತಾರೆ. ವಿದೇಶಕ್ಕೆ ತೆರಳಿ ವಾಪಸ್ಸಾದ ಬಳಿಕ ಪ್ರಧಾನಿ ಮೋದಿ ನಮ್ಮ ಗೌರವ ಹೆಚ್ಚಿದೆ ಎಂದು ಹೇಳುತ್ತಾರೆ. ಆದರೆ, ಪ್ರಧಾನಿ ಮೋದಿ ಜನತೆಯ ಹಿತಾಸಕ್ತಿಗಿಂತ ತಮ್ಮ ಸ್ನೇಹಿತರ ಆರೈಕೆಯಲ್ಲಿ ಹೆಚ್ಚು ನಿರತರಾಗಿದ್ದಾರೆ.

    ಇದನ್ನೂ ಓದಿ: ಮಾಲೆ ಧರಿಸಿ ಶಬರಿಮಲೆ ದರ್ಶನಕ್ಕೆ ಸಿದ್ದರಾದ ಕ್ರೈಸ್ತ ಪಾದ್ರಿ; ತೀವ್ರ ವಿರೋಧ

    ಬಡವರು ಹಾಗೂ ಮಧ್ಯಮ ವರ್ಗದವರನ್ನು ನಿರ್ಲಕ್ಷಿಸಿರುವ ಬಿಜೆಪಿ ಅಧಿಕಾರದಲ್ಲಿರುವುದೇ ತನ್ನ ಎಕೈಕ ಗುರಿ ಎಂದುಕೊಂಡಿದೆ. ಉದಾಹರಣೆಗೆ ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಗಾಗಿ ವಾಸ್ತವಾಂಶವನ್ನು ಅತಿಥಿಗಳಿಂದ ಮರೆಮಾಚಿ ಇವರು ಕಾರ್ಯಕ್ರಮವನ್ನು ನಡೆಸಿದ್ದಾರೆ. ಜಿ-20 ಸಭೆ ನಡೆಯುವ ಸ್ಥಳ ಕಲಾವೃತಗೊಂಡಿದ್ದನ್ನು ಉಲ್ಲೇಖಿಸಿದ ಪ್ರಿಯಾಂಕ ಗಾಂಧಿ ದೇಶದ ಜನರು ಭಯದಿಂದ ಏನು ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

    ದೇವರು ನಿಮಗೆ ಈಗಾಗಲೇ ಹೇಳಿದ್ದಾನೆ. ನಿಮ್ಮ ಅಹಂಕಾರವನ್ನು ಕಡಿಮೆ ಮಾಡಿಕೊಳ್ಳಿ. ಈ ದೇಶವು ನಿಮ್ಮನ್ನು ನಾಯಕನನ್ನಾಗಿ ಮಾಡಿದೆ. ಜನರನ್ನು ಮೊದಲು ಪರಿಗಣಿಸಿ ದೇಶದ ಪರಿಸ್ಥಿತಿಯನ್ನು ಉತ್ತಮಗೊಳಿಸಿ ಎಂದಿದ್ದಾನೆ. ಇದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts