More

    ದೇಶದ ಪ್ರಗತಿಗೆ ಕಾರ್ಮಿಕರ ಸೇವೆ ಹಿರಿದು

    ತರೀಕೆರೆ: ವಿವಿಧತೆಯಲ್ಲಿ ಏಕತೆ ಮತ್ತು ಸಮಗ್ರತೆ ಕಂಡುಕೊಂಡಿರುವ ಭಾರತ ವಿಶ್ವಗುರು ಸ್ಥಾನಕ್ಕೇರಲು ಕಾರ್ಮಿಕರ ಹಾಗೂ ರೈತರ ಸೇವೆ ಅಗತ್ಯವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಎಂ.ನರೇಂದ್ರ ಹೇಳಿದರು.
    ಬುಧವಾರ ಎಪಿಎಂಸಿ ಆವರಣದಲ್ಲಿ ಆಟೋಮೊಬೈಲ್ಸ್, ವಾಹನ ರಿಪೇರಿ ಸಂಘ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.
    ರಾಜಕಾರಣಿಗಳು, ಬಂಡವಾಳಶಾಹಿಗಳಿಂದ ದೇಶದ ಅಭಿವೃದ್ಧಿ ಅಸಾಧ್ಯ. ಶ್ರಮ ಪಡುವ ಕಾರ್ಮಿಕರಿದ್ದರೆ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ. ಅವರ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಮತ್ತು ಜೀವನ ಭದ್ರತೆಗೆ ಸರ್ಕಾರ ವಿವಿಧ ಯೋಜನೆ ಅನುಷ್ಠಾನಗೊಳಿಸಿ ಮುಂಚೂಣಿಗೆ ತರುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.
    ಗುಡಿ ಕೈಗಾರಿಕೆ ಹಾಗೂ ಕೂಲಿ ಕಾರ್ಮಿಕರ ಪರಿಶ್ರಮದಿಂದ ದೇಶ ಎಲ್ಲ ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿದೆ. ಪ್ರತಿ ಕಾರ್ಮಿಕನೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇ-ಶ್ರಮ ಯೋಜನೆ, ಕಾರ್ಮಿಕರ ಕಾರ್ಡ್ ಪಡೆದುಕೊಳ್ಳಬೇಕು ಎಂದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಾರೂಕ್ ಮಾತನಾಡಿ, ಕಾರ್ಮಿಕ ವರ್ಗದವರು ದುಶ್ಚಟಗಳಿಂದ ದೂರವಿರಬೇಕು. ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ಕಷ್ಟಪಟ್ಟು ದುಡಿಯುವ ಹಣವನ್ನು ಹಾಳು ಮಾಡದೆ ಕೂಡಿಡಬೇಕು ಎಂದು ಹೇಳಿದರು.
    ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್, ಕಾರ್ಮಿಕ ಸಂಘಟನೆ ಪ್ರಮುಖರಾದ ಶಫಿಕ್, ವಾಸು, ಜಯಣ್ಣ, ರೋನಕ್, ಇಮ್ರಾನ್ ಪಾಷಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts